Home » ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಮನೆ ಧ್ವಂಸ!! ಮಧ್ಯಪ್ರದೇಶ ಸರ್ಕಾರದ ನಡೆಗೆ ವ್ಯಾಪಕ ಪ್ರಶಂಸೆ

ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಮನೆ ಧ್ವಂಸ!! ಮಧ್ಯಪ್ರದೇಶ ಸರ್ಕಾರದ ನಡೆಗೆ ವ್ಯಾಪಕ ಪ್ರಶಂಸೆ

0 comments

ಮಧ್ಯಪ್ರದೇಶ: ಇಲ್ಲಿನ ಖಾರ್ಗೋನ್ ನಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭ ನಡೆದಿದ್ದ ಘರ್ಷಣೆ, ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ವ್ಯಕ್ತಿಗಳ ಮನೆಗಳನ್ನು ಧ್ವಂಸ ಮಾಡುವ ಮೂಲಕ ಅಲ್ಲಿನ ಸರ್ಕಾರ ನೆಲೆ ಇಲ್ಲದಂತೆ ಮಾಡಿದೆ.

ಘಟನೆ ನಡೆದ ಮಾರನೇ ದಿನವೇ ಮನೆ ಧ್ವಂಸ ಕಾರ್ಯಕ್ಕಿಳಿದ ಮಧ್ಯಪ್ರದೇಶ ಸರ್ಕಾರ, ಈ ವರೆಗೆ ಸುಮಾರು ಮನೆಗಳನ್ನು ನೆಲಕ್ಕೆಡವಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಮನೆಗಳನ್ನು ಕಲ್ಲಿನಂತೆಯೇ ಪುಡಿ ಮಾಡಿ ರಾಶಿ ಹಾಕುತ್ತೇವೆ ಎನ್ನುವ ಹೇಳಿಕೆಯೊಂದನ್ನು ನೀಡಿದ್ದ ಅಲ್ಲಿನ ಗೃಹ ಸಚಿವ ನರೋತ್ತಮ್ ಮಿಶ್ರಾ, ಕೊಟ್ಟ ಮಾತಿನಂತೆಯೇ ತಪ್ಪದೆ ಮನೆ ಪುಡಿಮಾಡುವ ಕೆಲಸಕ್ಕಿಳಿದಿದ್ದಾರೆ, ಇಂತಹ ರಾಜಕಾರಣಿ ನಮ್ಮ ರಾಜ್ಯಕ್ಕೂ ಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಚಿವರ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

You may also like

Leave a Comment