Home » Ramesh Jarkiholi : ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಸೇರ್ಪಡೆ? – ಕುತೂಹಲ ಕೆರಳಿಸಿದ ಅಣ್ಣ- ತಮ್ಮಂದಿರ ಭೇಟಿ!!

Ramesh Jarkiholi : ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಸೇರ್ಪಡೆ? – ಕುತೂಹಲ ಕೆರಳಿಸಿದ ಅಣ್ಣ- ತಮ್ಮಂದಿರ ಭೇಟಿ!!

by V R
0 comments

Ramesh Jarkiholi: ಬಿಜೆಪಿ ಸೇರುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದ ನಾಯಕ ರಮೇಶ್ ಜಾರಕಿ ಹೋಳಿ ಯವರು ಇದೀಗ ಮರಳಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.

ಹೌದು, ರಮೇಶ್ ಜಾರಕಿ ಹೋಳಿಯವರು ಮರಳಿ ಕಾಂಗ್ರೆಸ್ ಸೇರುವ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ. ಯಾಕೆಂದರೆ ಕಳೆದ ಕೆಲ ಸಮಯದಿಂದ ಒಟ್ಟಿಗೆ ಕಾಣಿಸಿಕೊಳ್ಳದ ಜಾರಕಿಹೊಳಿ ಬ್ರದರ್ಸ್‌ (Jarakiholi Brothers)ಇದೀಗ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಗೋಕಾಕ್‌ ಕಾರ್ಯಕ್ರಮದಲ್ಲಿ ಅಣ್ಣ-ತಮ್ಮ

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲಕ್ಷ್ಮೀ ದೇವಿ ಜಾತ್ರೆಗೆ ಸಂಬಂಧಿಸಿದಂತೆ ತಯಾರಿ ಸಭೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ವೇದಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ‌ ಕಾಣಿಸಿಕೊಂಡಿದ್ದಾರೆ. ಸುಮಾರು 10 ವರ್ಷಗಳ ನಂತರ ಈ ಜಾತ್ರೆ ನಡೆಯುತ್ತಿದ್ದು, ಈ ವಿಚಾರವಾಗಿ ಅಣ್ಣ-ತಮ್ಮ ಒಟ್ಟಿಗೆ ಸೇರಿದ್ದಾರೆ.

ಅಂದಹಾಗೆ ವೇದಿಕೆಯಲ್ಲಿ ಆರಂಭದಲ್ಲಿ ಇಬ್ಬರು ಪರಸ್ಪರ ಮಾತನಾಡದೆ ತಮಷ್ಟಕ್ಕೆ ತಾವು ಎಂಬಂತೆ ಇದ್ದರು. ಆದರೆ ವಿಷಾಧಾರಿತವಾಗಿ ಒಬ್ಬರಿಗೊಬ್ಬರು ಪೂರಕವಾಗಿ ಬೆಂಬಲಿಸಿದ್ದಾರೆ.ಜಿಲ್ಲಾಧಿಕಾರಿ ಜಾತ್ರೆಯ ಪೂರ್ವ ಸಿದ್ಧತೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಜನ ಜಂಗುಳಿಯನ್ನು ನಿಯಂತ್ರಿಸಲು ಅಗತ್ಯ ಸಿಬ್ಬಂದಿ ನಿಯೋಜನೆ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಎಲ್ಲಾ ತಯಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru : ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಮಹಿಳೆ- ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ!

You may also like