Home » Actress Ranya Rao: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4 ರಿಂದ 5 ಲಕ್ಷ ಕಮಿಷನ್‌!

Actress Ranya Rao: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4 ರಿಂದ 5 ಲಕ್ಷ ಕಮಿಷನ್‌!

0 comments

Actress Ranya Rao: ದುಬೈನಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಯಲ್ಲಿ ಬಂಧನಕ್ಕೊಳಗಾದ ನಟಿ ರನ್ಯಾ ರಾವ್‌ ಬಂಧನ ಪ್ರಕರಣಕ್ಕೊಂದು ಸ್ಫೋಟಕ ತಿರುವು ದೊರಕಿದೆ.

ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ರನ್ಯಾ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ ಬೇರೆಯೇ ಇದ್ದಾರೆ ಎನ್ನಲಾಗಿದೆ. 17ಕೋಟಿ ಬೆಲೆಯ ಚಿನ್ನ ಖರೀದಿ ಮಾಡುಷ್ಟ ರನ್ಯಾ ಶ್ರೀಮಂತಳಲ್ಲ. ಹಿರಿಯ ಪೊಲೀಸ್‌ ಅಧಿಕಾರಿಯ ಮಲಮಗಳು. ಆಕೆಯನ್ನು ಬಳಸಿಕೊಂಡರೆ ಸುಲಭದ ರೀತಿಯಲ್ಲಿ ಚಿನ್ನ ಸಾಗಾಟ ಮಾಡಬಹುದು. ಈ ಲೆಕ್ಕಾಚಾರದಲ್ಲಿ ರನ್ಯಾಳನ್ನು ಚಿನ್ನ ಸಾಗಾಟದಲ್ಲಿ ಬಳಸಲಾಗಿದೆ ಎಂದು ತಿಳಿದು ಬಂದಿದೆ.

ಏರ್ಪೋರ್ಟ್‌ನ ಕೆಲ ಅಧಿಕಾರಿಗಳು ಕೂಡಾ ಈ ಅಕ್ರಮ ಚಿನ್ನ ಸಾಗಟದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೂಡಾ ತನಿಖೆ ನಡೆಯುತ್ತಿದೆ. ಚಿನ್ನ ಸಾಗಾಟದಲ್ಲಿ ನಟಿ ರನ್ಯಾಗೆ ಕೆಜಿಗೆ ನಾಲ್ಕರಿಂದ ಐದು ಲಕ್ಷ ಕಮಿಷನ್‌ ಸಿಗುತ್ತಿದ್ದ ಕುರಿತು ಮಾಹಿತಿ ಲಭ್ಯವಾಗಿರುವ ಕುರಿತು ವರದಿಯಾಗಿದೆ. ಆದರೆ ರನ್ಯಾ ಬೆಂಗಳೂರಿಗೆ ತಂದ ಚಿನ್ನವನ್ನು ಯಾರಿಗೆ ಕೊಡುತ್ತಿದ್ದರು ಎನ್ನುವ ಕುರಿತು ತನಿಖೆ ನಡೆಯುತ್ತಿದೆ.

ನಟಿ ರನ್ಯಾ ಮೊಬೈಲ್‌ ವಶಕ್ಕೆ ಪಡೆಯಲಾಗಿದ್ದು, ಆಕೆಯ ಎರಡು ವರ್ಷದ ಬ್ಯಾಂಕ್‌ ವಿವರಗಳ ತನಿಖೆ ಮಾಡಲಾಗುತ್ತಿದೆ. ಈ ಅಕ್ರಮ ಚಿನ್ನ ಕಳ್ಳ ಸಾಗಾಣಿಕೆಯ ಅಸಲಿ ಕಿಂಗ್‌ ಪಿನ್‌ ಯಾರು? ಎನ್ನುವ ತನಿಖೆಯಲ್ಲಿ ಇದ್ದಾರೆ ಡಿಆರ್‌ಐ ಅಧಿಕಾರಿಗಳು.

You may also like