Prajwal Revanna Case: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ನಿನ್ನೆ ಪ್ರಜ್ವಲ್ ದೋಷಿ ಎಂದು ತೀರ್ಪು ನೀಡಿದ್ದ ನೀಡಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.ಪ್ರ ಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಬಿ.ಎನ್.ಜಗದೀಶ್ ವಾದ ಆರಂಭಿಸಿದ್ದು, ಐಪಿಸಿ 376(2)n ಮತ್ತು k ಅಡಿ ಆರೋಪ ಇದೆ. ಈ ಪ್ರಕರಣದಲ್ಲಿ ಕನಿಷ್ಟ10 ವರ್ಷ ಗರಿಷ್ಠ ಜೀವಾವಧಿ ಶಿಕ್ಷೆ ನೀಡಬಹುದು ವಾದ ಮಂಡಿಸುತ್ತಿದ್ದಾರೆ.
376 (2) (n ) ತಮ್ಮ ಸರ್ವೆಂಟ್ ಗಳ ಮೇಲೆ ಅತ್ಯಾಚಾರ ಆಗಿದೆ. ಸಂತ್ರಸ್ತೆ ಅವಿದ್ಯಾವಂತೆ, ಯಾವುದೇ ಸ್ಟೇಟಸ್ ಇಲ್ಲ, ಕೆಲಸಕ್ಕಾಗಿ ಊರು ಬಿಟ್ಟು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಆಗಿದೆ. ಆರೋಪಿ ಮನೆಯಲ್ಲಿ ಕೇವಲ 10ಸಾವಿರ ರೂಪಾಯಿಗೆ ಕೂಲಿ ಮಾಡ್ತಾ ಇದ್ರು ಎಂದಾಗ ಜಡ್ಜ್, ಕೇಸಿನ ಫ್ಯಾಕ್ಟ್ ಗೊತ್ತಿದೆ, ಯಾಕೆ ಗರಿಷ್ಠ ಶಿಕ್ಷೆ ನೀಡಬೇಕು ಎಂಬುದನ್ನ ಹೇಳಿ ಎಂದರು.
ಇದಕ್ಕೆ ಉತ್ತರಿಸಿದ ವಕೀಲ ಜಗದೀಶ್, ಸಂತ್ರಸ್ತ ಮಹಿಳೆಗೆ ಆರೋಪಿಯ ವಯಸ್ಸಿನ ಮಗ ಇದ್ದಾನೆ. ಆರೋಪಿ ತುಂಬಾ ಆರೋಪಿಯಾಗಿದ್ದಾನೆ. ರೇಪ್ ಕೇವಲ ದೈಹಿಕ ಹಿಂಸೆ ಅಲ್ಲ ಮಾನಸಿಕ ಹಿಂಸೆ ಕೂಡ ಆಗಿದೆ. ವೀಡಿಯೋ ಬಹಿರಂಗವಾಗಿದ್ದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನರ ಮಾಡಿದ್ದಳು. ಆರೋಪಿಯೇ ಮಹಿಳೆಯ ಒಪ್ಪಿಗೆ ಇಲ್ಲದೆ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ಬ್ಲಾಕ್ ಮೇಲ್ ಮಾಡಲು ವೀಡಿಯೋ ಮಾಡಿಕೊಂಡಿದ್ದಾನೆ. ಸಂತ್ರಸ್ತೆ ವಿರುದ್ಧ ವೀಡಿಯೋ ವನ್ನ ಅಸ್ತ್ರದ ರೀತಿ ಬಳಕೆ ಮಾಡಿಕೊಳ್ಳಲಾಗಿದೆ ಎಂದರು ಕೋರ್ಟ್‌ಗೆ ತಿಳಿಸಿದರು.
ಅಲ್ಲದೆ, ಆರೋಪಿ ಸಾಮಾನ್ಯವಾದ ವ್ಯಕ್ತಿ ಅಲ್ಲ, ಸಂಸದ ಆಗಿದ್ದವನು, ಕಾನೂನು ರಚನೆಯ ಭಾಗವಾಗಿದ್ದವನು. ಇಂತಹ ವ್ಯಕ್ತಿ ಕಾನೂನನ್ನ ಕೈಗೆತೆಗೆದುಕೊಂಡಿದ್ದಾನೆ. ಇದೇ ಆರೋಪಿ ವಿರುದ್ಧ ಹಲವು ಅತ್ಯಾಚಾರ ಪ್ರಕರಣಗಳು ಬಾಕಿ ಇದೆ. ಬೇರೆ ಬೇರೆ ಮಹಿಳೆಯ ಜೊತೆಗಿನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವೀಡಿಯೋ ಗಳನ್ನ ಹಲವು ಜನ ವೀಕ್ಷಿಸಿದ್ದಾರೆ.
ಇಂತಹ ವ್ಯಕ್ತಿ ಗೆ ಯಾವುದೇ ದಯೆ ತೋರಿಸಬಾರದು ಎಂದು ಕೋರ್ಟ್‌ಗೆ ಜಗದೀಶ್ ಮನವರಿಕೆ ಮಾಡಿದರು.
ಅನ್ಯಾಯವನ್ನ ಹೇಳಿಕೊಳ್ಳಲಾದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆ ಮಹಿಳೆಯನ್ನ ಆರೋಪಿ ಕುಟುಂಬ ಕಿಡ್ನಾಪ್ ಮಾಡಿತ್ತು. ಹೆದರಿಸುವ ಹಾಗೂ ಸಾಕ್ಷಿಯನ್ನ ತಿರುಚುವ ಯತ್ನ ಮಾಡಿದ್ರು. ಮಾಧ್ಯಮಗಳ ಸುಳ್ಳು ಹೇಳಿಕೆ ಕೊಡಿಸುವ ಕೆಲಸ ಮಾಡಿತ್ತು ಆರೋಪಿ ಕುಟುಂಬ. ಇಂತಹ ಕೃತ್ಯ ಎಸಗಿದ ಆರೋಪಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಸಿಕ್ಕ ಸಿಕ್ಕವರ ಮೇಲೆ ಆರೋಪ ಮಾಡುವ ಕೆಲಸ ಮಾಡಿದ್ದಾನೆ. ಕೋರ್ಟ್ ಟ್ರಯಲ್ ವಿಳಂಬ ಮಾಡುವ ಪ್ರಯತ್ನ ಕೂಡ ಮಾಡಿದ್ದ. ಇಂತಹ ವ್ಯಕ್ತಿಗೆ ಯಾವುದೇ ಕನಿಕರ ತೋರಿಸಬಾರದು ಎಂದು ಎಸ್ಪಿಪಿ ಬಿ.ಎನ್.ಜಗದೀಶ್ ವಾದ ಮಂಡಿಸಿದರು.
ಇದನ್ನೂ ಓದಿ: Mangalore: ಮಂಗಳೂರಿನಲ್ಲಿ NIA ಕಚೇರಿ ಸ್ಥಾಪನೆಯ ಮನವಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ
