5
Puttur: ಮದುವೆ ನೆಪದಲ್ಲಿ ಅತ್ಯಾಚಾರ ಮಾಡಿ ಮಗು ಕರುಣಿಸಿದ ಪ್ರಕರಣದ ಆರೋಪಿಯನ್ನು ಎರಡು ದಿನದೊಳಗೆ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಲ್ಲಾ ಎಸ್ಪಿ ಯವರಿಗೆ ಸೂಚನೆಯನ್ನು ನೀಡಿದ್ದಾರೆ.
ಎಸ್ಪಿ ಅವರಿಗೆ ಕರೆ ಮಾಡಿದ ಶಾಸಕ ಅಶೋಕ್ ರೈ ಅವರು ಆರೋಪಿ ಎಲ್ಲೇ ಇದ್ದರೂ ಆತನನ್ನು ಬಂಧಿಸಬೇಕು. ಆರೋಪಿಯನ್ನು ಇಷ್ಟು ದಿನ ಬಂಧಿಸದೇ ಇರುವುದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ. ಅದಕ್ಕಾಗಿ ತಂಡವನ್ನು ರಚನೆಮಾಡಿ ಆರೋಪಿಯನ್ನು ಎರಡು ದಿನದೊಳಗೆ ಬಂಧಿಸಬೇಕು ಮತ್ತು ನೊಂದ ಯುವತಿಗೆ ನ್ಯಾಯವನ್ನೂ ಕೊಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಇಲಾಖೆಗೆ ನನ್ನಿಂದ ಏನು ಸಹಾಯ ಬೇಕಿದ್ದರೆ ತಿಳಿಸಬೇಕು ಎಂದು ಶಾಸಕರು ತಿಳಿಸಿದ್ದಾರೆ.
ಇದನ್ನೂ ಓದಿ: BJP Leader Shootout: ಬಿಜೆಪಿಯ ಲೀಡರ್, ಉದ್ಯಮಿ ಮೇಲೆ ಶೂಟೌಟ್, ಸ್ಥಳದಲ್ಲೇ ಸಾವು
