Home » Rashmika Mandanna: ಹಾರರ್ ಸರಣಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!

Rashmika Mandanna: ಹಾರರ್ ಸರಣಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!

by ಹೊಸಕನ್ನಡ
0 comments

Rashmika Mandanna: ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿರುವ ರಶ್ಮಿಕಾ ಮಂದಣ್ಣ (Rashmika Mandanna) ತಮಿಳಿನ ಹೀರೋ ಜೊತೆಗೆ ಹಾರರ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವಾಗಿ ಪ್ರಾರಂಭ ಆಗಲಿದೆ.

ಹೌದು, ರಶ್ಮಿಕಾ ತಮಿಳಿನ ರಾಘವ್ ಲಾರೆನ್ಸ್ ಜೊತೆ ಹೊಸ ಸಿನಿಮಾನಲ್ಲಿ ನಟಿಸಲು ರೆಡಿಯಾಗಿದ್ದಾರೆ. ರಾಘವ್ ಲಾರೆನ್ಸ್ ತಮಿಳಿನ ಜನಪ್ರಿಯ ನಟರಾದರೂ ಸಹ ಎ ಸಾಲಿನ ಸ್ಟಾರ್ ನಟರಲ್ಲ. ಜೊತೆಗೆ ಹಾರರ್ ಥ್ರಿಲ್ಲರ್ ಸಿನಿಮಾಗಳ ಮೂಲಕವೇ ಅವರು ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದ್ದಾರೆ. ರಾಘವ್ ಅವರ ಜನಪ್ರಿಯ ಹಾರರ್ ಸಿನಿಮಾ ಸರಣಿಯಾದ ‘ಕಾಂಚನಾ’ದ ಮುಂದಿನ ಭಾಗದಲ್ಲಿ ರಶ್ಮಿಕಾ ಸಹ ನಟಿಸಲಿದ್ದಾರೆ.

ಈ ಮೊದಲು ‘ಕಾಂಚನಾ 4’ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕೆಲ ವಾರಗಳ ಮುಂಚೆ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಪೂಜಾ ಹೆಗ್ಡೆ ಬದಲಿಗೆ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿದೆ. ಸಿನಿಮಾನಲ್ಲಿ ರಾಘವ್ ಲಾರೆನ್ಸ್ ಎದುರು ದೆವ್ವದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರಂತೆ. ಸಿನಿಮಾದ ಬಗ್ಗೆ ಮಾತುಕತೆ ಸಂಪೂರ್ಣವಾಗಿದ್ದು ಕೆಲವೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

‘ಕಾಂಚನಾ 4’ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ರಾಘವ್ ಲಾರೆನ್ಸ್ ಮುಂದಾಗಿದ್ದಾರೆ. ಈ ಹಿಂದಿನ ‘ಕಾಂಚನಾ’ ಸಿನಿಮಾಗಳಲ್ಲಿ ರಾಘವ್ ಅವರೇ ದೆವ್ವದ ಪಾತ್ರದಲ್ಲಿ ನಟಿಸಿದ್ದರು. ಆದರೆ ‘ಕಾಂಚನಾ 4’ ಸಿನಿಮಾನಲ್ಲಿ ರಾಘವ್ ಜೊತೆಗೆ ರಶ್ಮಿಕಾ ಸಹ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ.

You may also like