Rat enters womans saree: ಮನೆಯಲ್ಲಿ ಜಿರಳೆ ಇಲಿಗಳು ಸೇರಿಕೊಂಡರೆ ಅವುಗಳು ಮಾಡೋ ಫಜೀತಿ ಒಂದೊಂದಲ್ಲ. ಹೌದು ಇಲಿಯಿಂದಾಗಿ ಒಂದು ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಒಂದು ನಾಟಕ ಶಾಲೆಯಲ್ಲಿ ನಾಟಕ ವೀಕ್ಷಿಸುತ್ತಿದ್ದ ಮಹಿಳೆ ಸೀರೆಯೊಳಗೆ ಪ್ರವೇಶಿಸಿದ್ದರಿಂದ ದೊಡ್ಡಮಟ್ಟದ ಗಲಾಟೆ ನಡೆದಿದೆ. ಇದರಿಂದ ನಾಟಕಕ್ಕೆ ಅಡಚಣೆ ಉಂಟಾಗಿದ್ದು, ಕೊನೆಗೆ ಮಾಲೀಕರು ಕ್ಷಮೆ ಕೇಳುವಂತಾಗಿದೆ.
ಪುಣೆಯ ಪ್ರತಿನಿಧಿ ನಗರದ ಯಶವಂತರಾವ್ ಚವಾಣ್ ನಾಟ್ಯಗೃಹದಲ್ಲಿ ಭಾನುವಾರ ಸಂಜೆ ‘ಗಂಧರ್ವ’ ಹೆಸರಿನ ನಾಟಕದ ಪ್ರದರ್ಶನವಾಗುವ ಸಮಯದಲ್ಲಿ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಜೋರಾಗಿ ಕಿರುಚಲು ಆರಂಭಿಸಿದ್ದಾರೆ.
ಆಕೆಯ ಸೀರೆಯೊಳಗೆ ಇಲಿ ಸೇರಿಕೊಂಡಿದ್ದು, ಅನಂತರ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರುತ್ತಾರೆ ಹಾಗೂ ಸುಮಾರು 800 ವೀಕ್ಷಕರು ಅಲ್ಲಿ ವೀಕ್ಷಣೆಗಾಗಿ ಬಂದಿದ್ದು, ವೀಕ್ಷಕರು ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
