Home » Nagmagala: ಹಿಂದೂ ಮುಖಂಡ ಶರಣ್ ಪಂಪವೆಲ್ ವಿರುದ್ಧ ಧಮ್ಕಿ ಪ್ರಕರಣ: ವ್ಯಕ್ತಿಯ ಬಂಧನ

Nagmagala: ಹಿಂದೂ ಮುಖಂಡ ಶರಣ್ ಪಂಪವೆಲ್ ವಿರುದ್ಧ ಧಮ್ಕಿ ಪ್ರಕರಣ: ವ್ಯಕ್ತಿಯ ಬಂಧನ

0 comments

Nagmangala: ನಾಗಮಂಗಲ (Nagmangala) ಗಣೇಶ ಮೆರವಣಿಗೆ ವೇಳೆ ನಡೆದ ಗಲಬೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ವೇಳೆ ಈದ್ ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ ಎಂದು ಹಿಂದೂಪರ ಮುಖಂಡ ಶರಣ್ ಪಂಪೈಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು.

ಸದ್ಯ ಇದನ್ನು ಸವಾಲಾಗಿ ತೆಗೆದುಕೊಂಡಿರುವ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಷರೀಫ್‌ ಧಮ್ ಇದ್ರೆ ಬಿಸಿ ರೋಡ್‌ಗೆ ಬಾ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ. ಹಿಂದೂಪರ ಸಂಘಟನೆಯ ಮುಖಂಡ ಶರಣ್ ಪಂಪೈಲ್ ಗೆ ಓಪನ್ ಚಾಲೆಂಜ್ ನೀಡಿರುವ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್, ವಾಟ್ಸಪ್ ಆಡಿಯೋ ಮೂಲಕ ಧಮ್ ಇದ್ರೆ ಮಿಲಾದ್ ಮೆರವಣಿಗೆ ತಡಿ ಎಂದು ಸವಾಲ್ ಹಾಕಿದ್ದಾರೆ.

ವಾಟ್ಸಪ್ ನಲ್ಲಿ ಆಡಿಯೋ ಸವಾಲು ಹಾಕಿರುವ ಷರೀಫ್ ಅವರ ಸವಾಲು ಸ್ವೀಕರಿಸಿರುವ ಹಿಂದೂ ಸಂಘಟನೆ ಮುಖಂಡರು, ಬಿಸಿರೋಡ್ ಚಲೋಗೆ ಕರೆ ಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿಸಿರೋಡ್ ಮೆರವಣಿಗೆ ಸಾಗುವಾಗ ಮೆರವಣಿಗೆ ಎದುರು ನಿಲ್ಲುವ ಸವಾಲು ಸ್ವೀಕರಿಸಿದ ಶರಣ್ ಪಂಪೈಲ್ ಸಾಮಾಜಿಕ ಜಾಲತಾಣ ಮೂಲಕ ಹಿಂದೂ ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.

ಇನ್ನೂ ಎರಡೂ ಕೋಮಿನ ಮುಖಂಡರ ಈ ರೀತಿಯಾದ ಉದ್ಧಟತನದ ಹೇಳಿಕೆಯಿಂದಾಗಿ ಆತಂಕದ ನಿರ್ಮಾಣವಾಗಿದೆ. ಇದೀಗ ಇಂದು (ಸೆಪ್ಟೆಂಬರ್ 16ರಂದು) ಬಂಟ್ವಾಳ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದ್ದು, ನಿಯೋಜನೆ ಆಡಿಯೋ ಸವಾಲು ಹಾಕಿರುವ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಷರಿಫ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

You may also like

Leave a Comment