Home » Ravindra Jadeja: ಐಪಿಎಲ್ ನಲ್ಲಿ 100 ನೇ ಕ್ಯಾಚ್ ಹಿಡಿಯುವ ಮೂಲಕ ದಾಖಲೆ ಬರೆದ ರವೀಂದ್ರ ಜಡೇಜಾ

Ravindra Jadeja: ಐಪಿಎಲ್ ನಲ್ಲಿ 100 ನೇ ಕ್ಯಾಚ್ ಹಿಡಿಯುವ ಮೂಲಕ ದಾಖಲೆ ಬರೆದ ರವೀಂದ್ರ ಜಡೇಜಾ

2 comments
Ravindra jadeja

Ravindra Jadeja: ಭಾರತದಲ್ಲಿ ಅತಿ ದೊಡ್ಡ ಹಬ್ಬದಂತೆ ಸಂಭ್ರಮಿಸುವ ಐಪಿಎಲ್ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಪಾಲಿಗೆ ದೊಡ್ಡ ಹಬ್ಬವೇ ಸರಿ.

ಇದೀಗ ಈ ಐಪಿಎಲ್ ನಲ್ಲಿ ಇತ್ತೀಚಿಗೆ ನಡೆದ ಕೊಲ್ಕತ್ತಾ ನೈಟ್ ಟ್ರೇಡರ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಜಯ ಸಾಧಿಸಲು ಕಾರಣರಾದ ರವೀಂದ್ರ ಜಡೇಜಾ ಅವರುವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಂತರ ಐಪಿಎಲ್ ನಲ್ಲಿ ದಾಖಲೆಯನ್ನು ಬರೆದಿದ್ದಾರೆ.

ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಅತ್ಯದ್ಭುತ ಬೌಲಿಂಗ್ ಪ್ರದರ್ಶಿಸಿ ಕೆಕೆಆ‌ರ್ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ಜಡೇಜಾ, ಸಿಎಸ್‌ಕೆ ಗೆಲ್ಲಲು ನೆರವಾಗಿದ್ದಾರೆ.

ಈ ಪಂದ್ಯದಲ್ಲಿ ಎರಡು ಕ್ಯಾಚ್‌ಗಳೊಂದಿಗೆ, ಜಡೇಜಾ ಫೀಲ್ಡರ್ ಆಗಿ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ ಆಟಗಾರ ಎಂಬ ಬಿರುದು ಪಡೆದಿದ್ದಾರೆ.

RCB ಆಟಗಾರ ಕೊಹ್ಲಿ ಐಪಿಎಲ್‌ ಇತಿಹಾಸದಲ್ಲಿ 242 ಪಂದ್ಯಗಳಲ್ಲಿ 110 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಅತಿ ಹೆಚ್ಚು ಬಾಲ್ ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಸಿ ಎಸ್ ಕೆ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ 205 ಪಂದ್ಯಗಳ ಪೈಕಿ 109 ಕ್ಯಾಚ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಪೊಲಾರ್ಡ್ 189 ಪಂದ್ಯಗಳ ಪೈಕಿ 103 ಕ್ಯಾಚ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ತಮ್ಮ 100ನೇ ಕ್ಯಾಚ್ ಹಿಡಿದು ನಾಲ್ಕನೇ ಸ್ಥಾನದಲ್ಲಿದ್ದಾರೆ ಇದೀಗ ರವೀಂದ್ರ ಜಡೇಜಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

You may also like

Leave a Comment