Home » ATM ಗಳಲ್ಲಿ 100, 200 ಮುಖಬೆಲೆಯ ನೋಟು ವಿತರಿಸುವಂತೆ ಬ್ಯಾಂಕುಗಳಿಗೆ RBI ಸೂಚನೆ

ATM ಗಳಲ್ಲಿ 100, 200 ಮುಖಬೆಲೆಯ ನೋಟು ವಿತರಿಸುವಂತೆ ಬ್ಯಾಂಕುಗಳಿಗೆ RBI ಸೂಚನೆ

0 comments

New delhi:ಸಾರ್ವಜನಿಕರಿಗೆ ಕರೆನ್ಸಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸಲು ಎಟಿಎಂಗಳಲ್ಲಿ 100 ಮತ್ತು 200 ರೂ ಮುಖಬೆಲೆಯ ನೋಟುಗಳನ್ನು ವಿತರಿಸುವುದನ್ನೂ ಖಚಿತಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಬ್ಯಾಂಕುಗಳನ್ನು ಕೇಳಿದೆ.

ಬ್ಯಾಂಕುಗಳು ಮತ್ತು ವೈಟ್ ಲೇಬಲ್ ಎಟಿಎಂ ಆಪರೇಟರ್ ಗಳು ಈ ನಿರ್ದೇಶನವನ್ನು ಹಂತ ಹಂತವಾಗಿ ಜಾರಿಗೆ ತರಬೇಕು.

ಆಗಾಗ್ಗೆ ಬಳಸುವ ಮುಖಬೆಲೆಯ ನೋಟುಗಳನ್ನ ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಎಲ್ಲಾ ಬ್ಯಾಂಕುಗಳು ಮತ್ತು ವೈಟ್ ಲೇಬಲ್ ಎಟಿಎಂ ಆಪರೇಟರ್ ಗಳು ತಮ್ಮ ಎಟಿಎಂಗಳಲ್ಲಿ ನಿಯಮಿತವಾಗಿ 100 ಮತ್ತು 200 ರೂ ಮುಖಬೆಲೆಯ ನೋಟುಗಳನ್ನು ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 30, 2025ರೊಳಗೆ, ಎಲ್ಲಾ ಎಟಿಎಂಗಳಲ್ಲಿ ಶೇಕಡಾ 75 ರಷ್ಟು ಎಟಿಎಂಗಳು ಕನಿಷ್ಠ ಒಂದು ಕ್ಯಾಸೆಟ್ಟಿಂದ 100 ಅಥವಾ 200 ರೂ ಮುಖಬೆಲೆಯ ನೋಟುಗಳನ್ನು ವಿತರಿಸಬೇಕು. ಮಾರ್ಚ್ 31, 2026 ರೊಳಗೆ ಎಲ್ಲಾ ಎಟಿಎಂಗಳಲ್ಲಿ 90% ಎಟಿಎಂಗಳು ಕನಿಷ್ಠ ಒಂದು ಕ್ಯಾಸೆಟ್ಟಿಂದ 100 ಅಥವಾ 200 ರೂ ಮುಖಬೆಲೆಯ ನೋಟುಗಳನ್ನು ವಿತರಿಸುವಂತಾಗಬೇಕು ಎಂದು ಆರ್ ಬಿಐ ಸೂಚಿಸಿದೆ.

You may also like