Home » Bengaluru Stamped: ಪ್ರಾಣ ಕಳೆದುಕೊಂಡ ಅಭಿಮಾನಿಗಳ ಕುಟುಂಬಕ್ಕೆ ಆರ್‌ಸಿಬಿ ಸಹಾಯಹಸ್ತ ನೀಡಿ – ಸಂಸದ ತೇಜಸ್ವಿ ಸೂರ್ಯ 

Bengaluru Stamped: ಪ್ರಾಣ ಕಳೆದುಕೊಂಡ ಅಭಿಮಾನಿಗಳ ಕುಟುಂಬಕ್ಕೆ ಆರ್‌ಸಿಬಿ ಸಹಾಯಹಸ್ತ ನೀಡಿ – ಸಂಸದ ತೇಜಸ್ವಿ ಸೂರ್ಯ 

0 comments

Bengaluru Stampede: ಚಿನ್ನಸ್ವಾಮಿ ಮೈದಾನದ ಹೊರಗೆ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತವನ್ನು ಉಲ್ಲೇಖಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವಿಟ್ ಮಾಡಿದ್ದು, ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲವಾದರೂ ಬದುಕುಳಿದ ಕುಟುಂಬಕ್ಕೆ ಹೊಣೆಗಾರರಿಂದ ಉತ್ತಮ ಪರಿಹಾರ ದೊರೆಯುವುದು ಮುಖ್ಯ ಎಂದು ಅವರು ಹೇಳಿದರು. “ರಾಜ್ಯ ಸರ್ಕಾರ ಖಂಡಿತವಾಗಿಯೂ ಪರಿಹಾರ ನೀಡಬೇಕು. ಆರ್‌ಸಿಬಿ ಸಹ ಅಭಿಮಾನಿಗಳಿಗೆ ಬದ್ಧತೆ ಪ್ರದರ್ಶಿಸಬೇಕು ಮತ್ತು ಅವರನ್ನು ಹುರಿದುಂಬಿಸಲು ಬಂದ ಅಭಿಮಾನಿಗಳ ಕುಟುಂಬಗಳಿಗೆ ಬೆಂಬಲ ನೀಡಬೇಕು” ಎಂದರು.

ನಾವು ಒಟ್ಟಾಗಿ ಆಚರಿಸುವಾಗ, ಸವಾಲುಗಳನ್ನು ಒಟ್ಟಾಗಿ ಎದುರಿಸಬೇಕು. ಅಭಿಮಾನಿಗಳ ಕಷ್ಟದಲ್ಲಿ ತಾವೂ ಪಾಲುದಾರರರಾಗಬೇಕು ಎಂದು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ. ಆದರೆ ಕೆಲವರು ನವ್ಯಾಕೆ ಸಹಾಯ ಮಾಡಬಾರದು. ಪಿಎಂ ಫಂಡ್‌ ನಿಂದ ನವ್ಯಾಕೆ ಕೊಡಬಾರದು ಎಂದು ಪ್ರಶ್ನಿಸಿದ್ದಾರೆ.

You may also like