Home » Kalaburagi: ವಕ್ಫ್ ರದ್ದಾಗದಿದ್ದರೆ ಜೀವ ತೆಗೆಯಲು ಸಿದ್ಧ- ಮರುಳಾರಾಧ್ಯ ಶಿವಾಚಾರ್ಯರಿಂದ ಪ್ರಚೋದನಾಕಾರಿ ಸ್ಟೇಟ್ಮೆಂಟ್, ಪ್ರಕರಣದ ದಾಖಲು

Kalaburagi: ವಕ್ಫ್ ರದ್ದಾಗದಿದ್ದರೆ ಜೀವ ತೆಗೆಯಲು ಸಿದ್ಧ- ಮರುಳಾರಾಧ್ಯ ಶಿವಾಚಾರ್ಯರಿಂದ ಪ್ರಚೋದನಾಕಾರಿ ಸ್ಟೇಟ್ಮೆಂಟ್, ಪ್ರಕರಣದ ದಾಖಲು

0 comments

Kalaburagi: ವಕ್ಫ್ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು ಮತ್ತು ಜೀವ ಕೊಡಲು ಸಿದ್ಧರಿದ್ದೇವೆ ಎಂದು ಕಲಬುರಗಿಯ(Kalaburagi) ಮಾರಾಳದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಈ ಬೆನ್ನೆಲ್ಲೇ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿವಾರ ನಡೆದ ʼವಕ್ಫ್ ಹಠಾವೋ ದೇಶ ಬಚಾವೋʼ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಯುವಕರ ಮನೆಯಲ್ಲಿ ತಲ್ವಾರ್‌ಗಳಿವೆ, ಯಾರೂ ಬರುತ್ತಾರೆ ಅವರನ್ನು ಕಡಿಯುತ್ತೇವೆ. ಇನ್ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡಬೇಕಾಗುತ್ತದೆ. ವಕ್ಫ್ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು ಮತ್ತು ಜೀವ ಕೊಡಲು ಸಿದ್ಧರಿದ್ದೇವೆ. ಕಲಬುರಗಿ ಜಿಲ್ಲೆಯಲ್ಲಿ 27 ಸಾವಿರ ಎಕರೆ ವಕ್ಫ್ ಆಸ್ತಿ ಇದೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ನೀವೇನಾದರೂ ಎಚ್ಚೆತ್ತುಕೊಳ್ಳದಿದ್ದರೆ ಭಾರತ ದೇಶವೇ ಇರಲ್ಲ” ಎಂದು ಹೇಳಿದ್ದಾರೆ.

ಸಧ್ಯ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮಶಾಳದ ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಅಫಝಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment