Home » BJP: ರಾಜ್ಯ ಬಿಜೆಪಿಯಲ್ಲಿ ಬಂಡಾಯ- ಪಾದಯಾತ್ರೆ ಮುಗಿಯುತ್ತಿದ್ದಂತೆ ಯತ್ನಾಳ್, ಜಾರಕಿಹೊಳಿ ಸೀಕ್ರೇಟ್ ಮೀಟಿಂಗ್; ಪ್ರತಾಪ್ ಸಿಂಹ ಕೂಡ ಭಾಗಿ !!

BJP: ರಾಜ್ಯ ಬಿಜೆಪಿಯಲ್ಲಿ ಬಂಡಾಯ- ಪಾದಯಾತ್ರೆ ಮುಗಿಯುತ್ತಿದ್ದಂತೆ ಯತ್ನಾಳ್, ಜಾರಕಿಹೊಳಿ ಸೀಕ್ರೇಟ್ ಮೀಟಿಂಗ್; ಪ್ರತಾಪ್ ಸಿಂಹ ಕೂಡ ಭಾಗಿ !!

0 comments
BJP

BJP: ಮುಡಾ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಮುಗಿಯುತ್ತಿದ್ದಂತೆ ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳು ಆರಂಭವಾಗಿದೆ. ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಪ್ರಭಾವಿ ನಾಯಕರಾದ ರಮೇಶ್ ಜಾರಕಿಹೊಳಿ (Ramesh jarkiholi) ಮತ್ತು ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal) ನೇತೃತ್ವದಲ್ಲಿ ಬಿಜೆಪಿ ಅತೃಪ್ತ ಶಾಸಕರು ಹಾಗೂ ನಾಯಕರ ಸಭೆ ನಡೆಸುತ್ತಿದ್ದಾರೆ..ಇದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಎಂಟ್ರಿ ಆಗಿದ್ದಾರೆ.

ಹೌದು, ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಅತೃಪ್ತ ಶಾಸಕರು ಹಾಗೂ ನಾಯಕರ ಸಭೆ ಕುತೂಹಲ‌ ಮೂಡಿಸಿದೆ. ಈ ಸಭೆಯಲ್ಲಿ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಅಣ್ಣಸಾಹೇಬ್ ಜೊಲ್ಲೆ, ಬಿ.ಬಿ ನಾಯಕ್ ಸೇರಿ ಹಲವು ಮುಖಂಡರುಗಳು ರಮೇಶ್ ಜಾರಕಿಹೊಳಿ, ಯತ್ನಾಳ್ ಗೆ ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಸಭೆಯ ಉದ್ದೇಶ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(B S Yadiyurappa) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿರುವ ನಾಯಕರು ಒಟ್ಟಾಗಿ ಸಭೆ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅಂದಹಾಗೆ ಈವರೆಗೆ ಬಿಜೆಪಿ ನಾಯಕತ್ವದ ವಿರುದ್ಧ ರಮೇಶ್ ಜಾರಕಿಹೊಳಿ ಮತ್ತು ಯತ್ನಾಳ್ ಒಂದು ತಂಡವಾಗಿ ಧ್ವನಿ ಎತ್ತುತ್ತಾ ಬಂದಿದ್ದರು. ಆದರೆ ಅವರ ತಂಡಕ್ಕೆ ಇದೀಗ ಮತ್ತಿಬ್ಬರ ಸೇರ್ಪಡೆ ಆಗಿದೆ. ಪ್ರತಾಪ ಸಿಂಹ ಮತ್ತು ಕುಮಾರ ಬಂಗಾರಪ್ಪ ತಂಡಕ್ಕೆ ಸೇರ್ಪಡೆ ಆದಂತಿದೆ. ಈ ಭಿನ್ನಮತೀಯರ ಸಭೆ ಮತ್ತು ಮಾತುಕತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

You may also like

Leave a Comment