Home » Red Cracker: ನಿಷೇಧಿತ ಕೆಂಪು ಪಟಾಕಿ ಬಳಸದಿರಿ: ಖಾಕಿ ಪಡೆಯಿಂದ ನಿಗಾ: ಆನ್‌ಲೈನ್‌ನಲ್ಲಿ ಮಾರಿದರೂ ಬೀಳುತ್ತೆ ಕೇಸ್‌!

Red Cracker: ನಿಷೇಧಿತ ಕೆಂಪು ಪಟಾಕಿ ಬಳಸದಿರಿ: ಖಾಕಿ ಪಡೆಯಿಂದ ನಿಗಾ: ಆನ್‌ಲೈನ್‌ನಲ್ಲಿ ಮಾರಿದರೂ ಬೀಳುತ್ತೆ ಕೇಸ್‌!

0 comments

Red Cracker: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ(Diwali Festival) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗಲೇ ಮಾರುಕಟ್ಟೆಗಳಲ್ಲಿ(Market) ಪಟಾಕಿಗಳ(Crackers) ಖರೀದಿ ಭರಾಟೆ ಶುರುವಾಗಿದೆ. ರಾಜ್ಯ ಸರಕಾರದ(State Govt) ಆದೇಶ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPSB) ನಿರ್ದೇಶನದನ್ವಯ ರಾಜ್ಯ ಪೊಲೀಸರು(Police) ಹಸಿರು ಪಟಾಕಿ(Green Crackers) ಹೊರತುಪಡಿಸಿ ನಿಷೇಧಿತ ಇತರ ಪಟಾಕಿಗಳ ಮಾರಾಟ, ಪೂರೈಕೆ ಮೇಲೆ ರಾಜ್ಯದೆಲ್ಲೆಡೆ ನಿಗಾ ಇರಿಸಿದ್ದಾರೆ.

ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ವಹಿವಾಟು ನಡೆಸಲು ವ್ಯಾಪಾರಿಗಳು ಸಜ್ಜಾಗಿದ್ದಾರೆ. ಆನ್‌ಲೈನ್‌ನಲ್ಲಿ ಪಟಾಕಿ ವ್ಯಾಪಾರವೂ ಜೋರಾಗಿವೆ. ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಬಳಸುವಂತೆ ರಾಜ್ಯ ಸರಕಾರವು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ, ಕೆಂಪು ಪಟಾಕಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿ ವ್ಯವಹಾರ, ಮಾರಾಟ, ಖರೀದಿ ಬಗ್ಗೆ ನಿಗಾ ಇಡಲು ಖಾಕಿ ಪಡೆ ಸಜ್ಜಾಗಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುವ ಪಟಾಕಿಗಳನ್ನು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪಟಾಕಿ ಸರಬರಾಜು ಮಾಡುವವರ ವಿರುದ್ಧ ಪೊಲೀಸರು ಇನ್ನಷ್ಟು ಬಿಗಿಯಾಗಿ ಕಣ್ಗಾವಲು ಇರಿಸಲು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದಲ್ಲೇಕಿಲ್ಲ ಪಟಾಕಿ ಉತ್ಪಾದನೆ?
ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ಮಾರಾಟ ಮಾಡುವ ಬಗ್ಗೆ ಕೆಎಸ್‌ಪಿಸಿಬಿ ಮೇಲ್ವಿಚಾರಣೆ ಮಾಡುತ್ತಿದೆ. ಪಟಾಕಿ ಉತ್ಪಾದನೆ ಮಾಡುವ ಘಟಕ ಇದ್ದರೆ ಮಾತ್ರ ಅಂತಹ ಕಡೆಗಳಿಗೆ ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಲು ಕೆಎಸ್‌ಪಿಸಿಬಿಗೆ ಅವಕಾಶಗಳಿವೆ. ಆದರೆ ಕರ್ನಾಟಕದಲ್ಲಿ ಪಟಾಕಿ ಉತ್ಪಾದನ ಘಟಕಗಳು ಇಲ್ಲ. ರಾಜ್ಯದ ವಾತಾವರಣದಲ್ಲಿ ಅಧಿಕ ತೇವಾಂಶ ಇರೋ ಕಾರಣ ಪಟಾಕಿ ಉತ್ಪಾದನೆಗೆ ಕರ್ನಾಟಕ ಸೂಕ್ತವಾದ ವಾತಾವರಣ ಇಲ್ಲ. ಪಟಾಕಿ ಉತ್ಪಾದನೆ ಮಾಡಿದರೂ ಅದು ಸಿಡಿಯೋದು ಅನುಮಾನ. ಹಾಗಾಗಿ ರಾಜ್ಯದಲ್ಲಿ ಪಟಾಕಿ ತಯಾರಿಕಾ ಘಟಕಗಳು ಇಲ್ಲ. ಅದರಿಂದ ಹೊರ ರಾಜ್ಯ ತಮಿಳುನಾಡುನಿಂದ ಹೆಚ್ಚಾಗಿ ಕರ್ನಾಟಕಕ್ಕೆ ಪಟಾಕಿಗಳು ಬರುತ್ತಿವೆ.

ಆನ್‌ಲೈನ್‌ನಲ್ಲಿ ಮಾರಿದರೂ ಕ್ರಮ:
ಮಾರುಕಟ್ಟೆಗಳಲ್ಲಿ ಕೆಂಪು ಪಟಾಕಿಗಳ ಮಾರಾಟ ಹಾಗೂ ಪಟಾಕಿ ಸಿಡಿಸಿರುವವರ ವಿರುದ್ಧ ಮಾತ್ರ ಪೊಲೀಸ್‌ ಇಲಾಖೆ ಕಣ್ಣಿಟ್ಟಿಲ್ಲ. ಹಬ್ಬದ ವೇಳೆ ಆನ್‌ಲೈನ್‌ನಲ್ಲಿ ವಿವಿಧ ಕಂಪೆನಿಗಳು ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡುತ್ತವೆ. ಅಂತವರ ವಿರುದ್ಧವೂ, ಸೈಬರ್‌ ಕ್ರೈಂ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾವಿ, ರಾಯಚೂರು, ಉಡುಪಿ, ಮೈಸೂರು, ಮಂಗಳೂರು, ಬಳ್ಳಾರಿ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಕೆಂಪು ಪಟಾಕಿ ಮಾರಾಟವಾಗುವ ಬಗ್ಗೆ ಮಾಹಿತಿ ಇದೆಯಂತೆ. ಈ ರೀತಿ ಪೊಲೀಸರ ಕಣ್ತಪ್ಪಿಸಿ ನಿಷೇಧಿತ ಪಟಾಕಿಗಳನ್ನು ವ್ಯಾಪಾರಿಗಳು ಮಾರಾಟ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಎಚ್ಚರಿಕೆಯನ್ನು ಪೊಲೀಸ್‌ ಇಲಾಖೆ ನೀಡಿದೆ.

ಹಸಿರು ಪಟಾಕಿ ಖಾತ್ರಿ ಮಾಡಿಕೊಳ್ಳುವುದು ಹೇಗೆ?
ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಎಂದಿದೆ. ಗಾದರೆ ಈ ಹಸಿರು ಪಟಾಕಿಯನ್ನು ಕಂಡು ಹಿಡಿಯೋದು ಹೇಗೆ? ಇಷ್ಟು ಮಾಡಿ, ಏನೆಂದರೆ, ಪಟಾಕಿ ಪ್ಯಾಕ್‌ನ ಮೇಲಿರುವ ಕ್ಯೂಆರ್‌ ಕೋಡ್‌ನ್ನು ಸ್ಕ್ಯಾನ್‌ ಮಾಡಿ, ಆಗ ನಿಮಿಗೆ ಪಟಾಕಿ ವಿವರ ಸಿಗುವುದು.

“ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಬೇಕೇ ಹೊರತು ಪಟಾಕಿ ಹಚ್ಚಿ ಅಲ್ಲ. ಪಟಾಕಿ ಹಚ್ಚಲೇ ಬೇಕು ಎಂದಾದರೆ ಹಸಿರು ಪಟಾಕಿ ಮಾತ್ರ ಸಿಡಿಸಿ. 125 ಡೆಸಿಬಲ್‌ಗಿಂತ ಹೆಚ್ಚು ತೀವ್ರತೆಯ ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿ ಸಿಡಿಸಬಾರದು. ನಿಷೇಧಿತ ಪಟಾಕಿ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು”. ಎಂದು ಅರಣ್ಯ ಸಚಿವರಾದ ಈಶ್ವರ ಖoಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment