Home » Reels And Short Videos: ರೀಲ್ಸ್ ಕ್ರೇಜಿನಿಂದ ಬಸ್ ಸ್ಟಾಂಡಿನಲ್ಲಿ ಬೆತ್ತಲಾದ ಯುವಕ – ಮುಂದೆ ಏನಾಯಿತೆಂದು ನೀವೆ ನೋಡಿ

Reels And Short Videos: ರೀಲ್ಸ್ ಕ್ರೇಜಿನಿಂದ ಬಸ್ ಸ್ಟಾಂಡಿನಲ್ಲಿ ಬೆತ್ತಲಾದ ಯುವಕ – ಮುಂದೆ ಏನಾಯಿತೆಂದು ನೀವೆ ನೋಡಿ

0 comments
Reels And Short Videos

Reels And Short Videos: ಇತ್ತೀಚಿಗೆ ಯುವಕ ಯುವತಿಯರು ಫೇಮಸ್ ಆಗಬೇಕು, ಹಣ (Money) ಮಾಡಬೇಕು ಎಂಬ ಕ್ರೇಜ್ ನಲ್ಲಿ  ಲೈಕ್ಸ್, ಶೇರ್ಸ್, ಕಾಮೆಂಟ್ಸ್ ಪಡೆಯಲು ಏನು ಮಾಡೋಕು ಹಿಂದೆ ಮುಂದೆ ನೋಡಲ್ಲ. ಅಂತೆಯೇ ಇಲ್ಲೊಬ್ಬ  ಓವರ್ ಆ್ಯಕ್ಷನ್ ಆಗಿ ಅರೆಬೆತ್ತಲಾದ ಯುವಕನಿಗೆ (Young Man)  ಏನಾಯಿತು ಅಂತ ನೀವೇ ನೋಡಿ.

Rahul Gandhi: ನನಗೆ ಶೇಕ್ ಹ್ಯಾಂಡ್ ಮಾತ್ರ ಕೊಟ್ರಿ, ಮೋದಿಗೆ ತಲೆಬಾಗಿ ನಮಸ್ಕರಿಸಿದ್ರಿ, ಯಾಕೆ ಎಂದ ರಾಹುಲ್ ಗೆ ಮುಟ್ಟಿನೋಡುವಂತ ಉತ್ತರ ಕೊಟ್ಟ ಸ್ಪೀಕರ್ !!

ಹೌದು, ಚಿಕ್ಕೋಡಿಯ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೀಲ್ಸ್ ಮಾಡಿ ಫೇಮಸ್ ಆಗಲು ಮುಂದಾಗಿದ್ದ ಯುವಕ ಶರ್ಟ್ ಬಿಚ್ಚಿ ಅರೆನಗ್ನವಾಗಿ  ಬಸ್ ನಿಲ್ದಾಣದಲ್ಲಿ ರೌಂಡ್ಸ್ ಹಾಕಿದ್ದಾನೆ. ಅಷ್ಟೇ ಅಲ್ಲ  ಹುಡುಗೀರು ನೋಡಲೆಂದು ಬಟ್ಟೆ ಧರಿಸದೆ ಬಂದು ಪೋಸ್ ಕೊಟ್ಟು ವಿಡಿಯೋ (Reels And Short Videos) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ ಮಾಡಿದ್ದ. ಈ ವಿಡಿಯೋ ನೋಡಿದ ಪೊಲೀಸರು ಆತನನ್ನು ಠಾಣೆಗೆ ಕರೆಯಿಸಿ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಡಿಯೋ ಮಾಡಿದ ಯುವಕನನ್ನು ಅಥಣಿ ತಾಲೂಕಿನ ಶಿನಾಳ ಗ್ರಾಮದ ಬಾಳೇಶ್ ದುರ್ಗಿ ಎಂದು ಗುರುತಿಸಲಾಗಿದೆ. ಸದ್ಯ ತನ್ನ ತಪ್ಪು ಅರಿತು ತನ್ನದೇ ಇನ್ ಸ್ಟಾ ಪೇಜ್ ನಲ್ ಯುವಕ ಮತ್ತೊಂದು ವಿಡಿಯೋ ಶೇರ್ ಮಾಡಿದ್ದು, ನಾನು ತಪ್ಪು ಮಾಡಿದ್ದೇನೆ ಇನ್ಯಾರು ಈ ರೀತಿ ಮಾಡಬೇಡಿ ಎಂದು ಸಂದೇಶ ನೀಡಿದ್ದಾನೆ. ಮುಂದೇ ನಾನು ಈ ವಿಡಿಯೋ ಮಾಡೋದಿಲ್ಲ, ನೀವು ಮಾಡಬೇಡಿ ಎಂದು ಯುವಕ ಕೈ ಮುಗಿದು ಮನವಿ ಮಾಡಿದ್ದಾನೆ.

ಇಂತಹ ಘಟನೆಗಳು ಆಗಾಗ ಕೇಳಿ ಬರುತ್ತಿದೆ. ಅಂತೆಯೇ ರೀಲ್ಸ್‌‌ನಲ್ಲಿ ಶೋ ಕೊಡುತ್ತಿದ್ದ ಮತ್ತೊಬ್ಬ ಸೋಷಿಯಲ್‌ ಮೀಡಿಯಾ ಸ್ಟಾರ್‌ ಅರೆಸ್ಟ್ ಆಗಿದ್ದಾನೆ. ಇನ್ಯಾರೋ ರೀಲ್ಸ್ ಗಾಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅದಕ್ಕಾಗಿ  ಇಂತಹ ರೀಲ್ಸ್ ಮಾಡೋ ಪುಂಡರ ಕಡೆಗೆ ಪೊಲೀಸ್ ಪಡೆ ಒಂದು ಕಣ್ಣಿಟ್ಟಿದೆ.

You may also like

Leave a Comment