6
Rajat Kishan: ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಷರತ್ತು ಸಹಿತ ಜಾಮೀನು ಪಡೆದು ಹೊರಗೆ ಬಂದಿದ್ದ ರಜತ್, ಜಾಮೀನಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಈ ಆರೋಪದ ಮೇಲೆ ಪೊಲೀಸರು ರಜತ್ ನನ್ನು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿಚಾರಣೆಗೆ ಹಾಜರಾಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ ರಜತ್, ಬಳಿಕ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಇಂದು ನೋಟಿಸ್ ನೀಡಲಾಗಿತ್ತು.
ರಜತ್ ಅವರನ್ನು ಬಂಧಿಸಿ 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಿರುವ ಪೊಲೀಸರು ಬಳಿಕ ನ್ಯಾಯಾಂಗ ಬಂಧನ್ಯಕೆ ಪಡೆಯುವ ಸಾಧ್ಯತೆ ಇದೆ. ಆರೋಪಿ ವಿನಯ್ ಗೌಡ ಮನೆಗೂ ಸಹ ಪೊಲೀಸರು ಭೇಟಿ ನೀಡಿದ್ದು ಅವರನ್ನೂ ಸಹ ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
