Home » Chamarajanagara: ಆಟವಾಡುವ ವೇಳೆ ಸಂಬಂಧಿಕರ ಮಗುವಿಗೆ ಪೆಟ್ಟು; ಹೆದರಿ ನೇಣಿಗೆ ಶರಣಾದ 12ರ ಬಾಲಕ!

Chamarajanagara: ಆಟವಾಡುವ ವೇಳೆ ಸಂಬಂಧಿಕರ ಮಗುವಿಗೆ ಪೆಟ್ಟು; ಹೆದರಿ ನೇಣಿಗೆ ಶರಣಾದ 12ರ ಬಾಲಕ!

0 comments

Chamarajanagara: ಆಟವಾಡುವ ವೇಳೆ ಸಂಬಂಧಿಕರ ಮಗುವಿಗೆ ಪೆಟ್ಟಾಗಿದ್ದಕ್ಕೆ ಹೆದರಿಕೊಂಡ 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಮೃತ ಬಾಲಕನನ್ನು ಪ್ರಜ್ವಲ್‌ (12) ಎಂದು ಗುರುತಿಸಲಾಗಿದೆ.

ಪ್ರಜ್ವಲ್‌ ತನ್ನ ಸಂಬಂಧಿಕರ ಮಗುವಿನ ಜೊತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗು ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದೆ. ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಗು ಚೇತರಿಸಿಕೊಂಡಿತ್ತು. ಆದರೆ ಇದರಿಂದ ಮನನೊಂದ ಬಾಲಕ ಪ್ರಜ್ವಲ್‌ ಮಗುವಿಗೆ ಏನಾದರೂ ಆದರೆ ನನಗೆ ಬೈಯುತ್ತಾರೆ ಎಂದು ಹೆದರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

You may also like