Home » RIL: ಅಪರೇಷನ್‌ ಸಿಂಧೂರ ಹೆಸರಲ್ಲಿ ರಿಲಯನ್ಸ್‌ ವಿವಾದ!

RIL: ಅಪರೇಷನ್‌ ಸಿಂಧೂರ ಹೆಸರಲ್ಲಿ ರಿಲಯನ್ಸ್‌ ವಿವಾದ!

0 comments

RIL: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಉಗ್ರರ ನೆಲೆಗಳ ದಾಳಿಯನ್ನು ಅಪರೇಷನ್‌ ಸಿಂಧೂರ ಎಂಬ ಹೆಸರನ್ನು ನೋಂದಣಿ ಮಾಡಲು ಮುಕೇಶ್‌ ಅಂಬಾನಿ ಕಂಪನಿ ಸಲ್ಲಿಸಿದ ಅರ್ಜಿಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಿಲಯನ್ಸ್‌ ಇದೀಗ ಸ್ಪಷ್ಟನೆ ನೀಡಿದೆ. ಆಪರೇಷನ್‌ ಸಿಂಧೂರ ಎಂಬ ಹೆಸರನ್ನು ಟ್ರೇಡ್‌ಮಾರ್ಕ್‌ ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಂಡಿದೆ.

ಈ ಹೆಸರಿನ ಅರ್ಜಿ ಅವರ ಮನರಂಜನಾ ವಿಭಾಗವಾದ ಜಿಯೋ ಸ್ಟುಡಿಯೋಸ್‌ನಿಂದ ʼಆಕಸ್ಮಿಕವಾಗಿʼ ಕಿರಿಯ ಉದ್ಯೋಗಿಯೊಬ್ಬರಿಂದ ಸಲ್ಲಿಸಲಾಯಿತು. ಈ ಕುರಿತು ಆಂತರಿಕ ಪರಿಶೀಲನೆ ಮಾಡಿದ ನಂತರ ಕಂಪನಿ ತಕ್ಷಣವೇ ಅರ್ಜಿಯನ್ನು ಹಿಂತೆಗೆದುಕೊಂಡಿತು ಎಂದು ಸ್ಪಷ್ಟಪಡಿಸಿದೆ.

ಮೇ7,2025 ರ ಬೆಳಿಗ್ಗೆ 10.42 ರಿಂದ ಸಂಜೆ 6.27 ರವರೆಗೆ ನಾಲ್ವರು ಈ ಹೆಸರನ್ನು ರಿಜಿಸ್ಟ್ರೇಷನ್‌ ಮಾಡಲು ಅರ್ಜಿ ಸಲ್ಲಿಸಿದ್ದರು. ಮುಕೇಶ್‌ ಅಂಬಾನಿಯ ರಿಲಯನ್ಸ್‌ ಕಂಪನಿ, ಮುಂಬೈ ನಿವಾಸಿ ಮುಖೇಶ್‌ ಚೆತ್ರಮ್‌ ಅಗರವಾಲ್‌, ನಿವೃತ್ತ ವಾಯುಪಡೆ ಅಧಿಕಾರಿ ಗ್ರೂಪ್‌ ಕ್ಯಾಪ್ಟನ್‌ ಕಮಲ್‌ ಸಿಂಗ್‌ ಓಬೆರ್ಹ್‌, ದೆಹಲಿ ಮೂಲದ ವಕೀಲ ಅಲೋಕ್‌ ಕೊಠಾರಿ.

You may also like