Home » ಬೆಳ್ತಂಗಡಿ ನ್ಯಾಯಾಲಯಕ್ಕೆ ಖ್ಯಾತ ವಕೀಲ ರಾಜಶೇಖರ್‌ ಹಿಲಿಯಾರ್‌, ದೊರೆ ರಾಜು ಆಗಮನ

ಬೆಳ್ತಂಗಡಿ ನ್ಯಾಯಾಲಯಕ್ಕೆ ಖ್ಯಾತ ವಕೀಲ ರಾಜಶೇಖರ್‌ ಹಿಲಿಯಾರ್‌, ದೊರೆ ರಾಜು ಆಗಮನ

0 comments

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಜ.3) ಮಧ್ಯಾಹ್ನ 12.15 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈ ಕೋರ್ಟ್‌ನ ಹಿರಿಯ ನ್ಯಾಯವಾದಿ ದೊರೆ ರಾಜು ಅವರು ಹಾಜರಾಗಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ 39/25 ಪ್ರಕರಣಕ್ಕೆ ಕುರಿತಂತೆ ವಾದ ಮಂಡನೆ ಮಾಡಲು ದೊರೆ ರಾಜು ಅವರು ಬಂದಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಪರ ಸಂತ್ರಸ್ತರು ಎಂಬ ನೆಲೆಯಲ್ಲಿ ಖ್ಯಾತ ವಕೀಲರಾದ ರಾಜಶೇಖರ್‌ ಹಿಲಿಯಾರ್‌, ಮಹೇಶ್‌ ಕಜೆ, ಸುನಿಲ್‌, ಪ್ರದೀಪ್‌, ಕೇಶವ ಬೆಳಾಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಇಂದು ಮಧ್ಯಾಹ್ನ 12 ಗಂಟೆಗೆ ಹಾಜರಾಗಿದ್ದಾರೆ. ಈ ಪ್ರಕರಣದಲ್ಲಿ ವಕಾಲತ್ತು ಸಲ್ಲಿಸಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರು ಸಂತ್ರಸ್ತರು ಅಥವಾ ಪ್ರಕರಣ ದಾಖಲಿಸಲು ಆದೇಶ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

You may also like