Home » Darshan: ರೇಣುಕಾ ಸ್ವಾಮಿ ಹೆಂಡತಿಗೆ ಗಂಡು ಮಗು ಜನನ- ಜೈಲಲ್ಲಿರೋ ದರ್ಶನ್ ಹೇಳಿದ್ದಿಷ್ಟು

Darshan: ರೇಣುಕಾ ಸ್ವಾಮಿ ಹೆಂಡತಿಗೆ ಗಂಡು ಮಗು ಜನನ- ಜೈಲಲ್ಲಿರೋ ದರ್ಶನ್ ಹೇಳಿದ್ದಿಷ್ಟು

377 comments

Darshan: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣ ಇಡೀ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ಸುದ್ದಿಯಾದ ಪ್ರಕರಣ. ರೇಣುಕಾಸ್ವಾಮಿ ಸಾವಿನ ಸಂದರ್ಭ ಅವರ ಪತ್ನಿ ಗರ್ಭಿಣಿಯಾಗಿದ್ದರು. ಇದೀಗ ರೇಣುಕಾಸ್ವಾಮಿ ಅವರ ಪತ್ನಿ ಡೆಲಿವರಿ ಆಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬೆನ್ನಲ್ಲೇ ಈ ಬೆಳವಣಿಗೆ ಬಗ್ಗೆ ಜೈಲಲ್ಲಿರೋ ದರ್ಶನ್(Darshan) ಪ್ರತಿಕ್ರಿಯಿಸಿದ್ದಾರೆ.

ಹೌದು, ರೇಣುಕಾಸ್ವಾಮಿಗೆ ಗಂಡು ಮಗು ಆಗಿರುವ ಸುದ್ದಿ ದರ್ಶನ್ ಅವರಿಗೆ ತಿಳಿಸಿದೆ. ಜೈಲು ಸಿಬ್ಬಂದಿ ದರ್ಶನ್ ಗೆ ಮಾಹಿನಿ ನೀಡಿದ್ದು, ವಿಷಯ ತಿಳಿದ ದರ್ಶನ್, ಹೌದಾ.. ಒಳ್ಳೇದಾಗಲಿ ಎಂದು ಹೇಳಿದ್ದಾರಂತೆ. ಮಗುವಾದ ದಿನವೇ ಸಿಬ್ಬಂದಿ ನಟ ದರ್ಶನ್ ಗೆ ಮಾಹಿತಿ ನೀಡಿದ್ದಾರಂತೆ. ಸಿಬ್ಬಂದಿ ಹೇಳ್ತಿದ್ದಂತೆ ಒಳ್ಳೆಯದಾಗಲಿ ಎಂದು ನಟ ದರ್ಶನ್ ಹೇಳಿದ್ದಾರಂತೆ.

ಅಂದಹಾಗೆ ಅಕ್ಟೋಬರ್ 16ರಂದು ಬೆಳಗ್ಗೆ ಜಾವ 7ಗಂಟೆ 1 ನಿಮಿಷಕ್ಕೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನವಾಗಿದೆ ಎನ್ನಲಾಗಿದೆ. ಮಗುವನ್ನು ಅಬ್ಜರ್ವೇಶನ್ ನಲ್ಲಿ ಇಡಲಾಗಿದೆ.

You may also like

Leave a Comment