Renukaswami Case: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಇಂದು ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ನ್ಯಾ ಜೆ ಬಿ ಪರ್ದೀವಾಲ ಮತ್ತು ನ್ಯಾ ಆರ್ ಮಹದೇವನ್ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಈಗಾಗಲೇ ಆರು ಬಾರಿ ಪ್ರಕರಣದ ವಿಚಾರಣೆ ನಡೆದಿದೆ.
ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಡಿಜಿಟಲ್ ಸಾಕ್ಷ್ಯ, ರೇಣುಕಾಸ್ವಾಮಿ ಹತ್ಯೆ ಮಾಡಲು ನೀಡಿರುವ ಹಿಂಸೆ, ಶಾಕ್ ಕೊಟ್ಟಿರುವ ಮಾಹಿತಿ ಸೇರಿ ಹಲವು ಅಂಶಗಳು ಪೀಠದ ಮುಂದೆ ಇರಿಸಲಾಗಿದೆ. ಇಂದು ಪೊಲೀಸರ ಪರವಾಗಿ ಹಿರಿಯ ನ್ಯಾಯವಾದಿ ಸಿದ್ದಾರ್ಥ್ ಲೂತ್ರಾ, ದರ್ಶನ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಾದ ನಾಗರಾಜು ಆರ್, ಅರುಣ್ ಕುಮಾರ್, ಲಕ್ಷ್ಮಣ್ ಎಂ, ಪವಿತ್ರಾಗೌಡ, ಜಗದೀಶ್, ಪ್ರದೂಷ್ ಎಸ್ ರಾವ್ ಬೇಲ್ ರದ್ದಿಗೆ ಮನವಿ ಮಾಡಲಾಗಿದೆ. ಸುಪ್ರೀಮ್ ಕೋರ್ಟ್ ಹೈಕೋರ್ಟ್ ನೀಡಿರುವ ಜಾಮೀನನ್ನು ಎತ್ತಿ ಹಿಡಿಯುತ್ತಾ ಇಲ್ಲಾ ರದ್ದು ಮಾಡುತ್ತಾ ಅನ್ನೋದನ್ನು ನೋಡಬೇಕಷ್ಟೆ.
