4
Renukaswamy Murder Case: ಸ್ಯಾಂಡಲ್‌ವುಡ್ ನಟ ದರ್ಶನ್ ಆಂಡ್ ಗ್ಯಾಂಗ್ ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಮೃತಪಟ್ಟ ಆರೋಪದ ಸುದ್ದಿಯ ಜೊತೆಗೆ ಇದೀಗ ಮೃತ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ ಮೃತ ರೇಣುಕಾಸ್ವಾಮಿ ಮಗನ ನಾಮಕರಣ ಸಮಾರಂಭ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆಯಾದಾಗ ಆತನ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದಳು. ಅಕ್ಟೋಬರ್ 16 ರಂದು ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಇವರಿಬ್ಬರ ಮಗುವಿಗೆ ಐದು ತಿಂಗಳು ತುಂಬಿದೆ. ನಾಳೆ ನಾಮಕರಣ ಶಾಸ್ತ್ರವನ್ನು ಇಡಲಾಗಿದೆ. ಇನ್ನು ರೇಣುಕಾಸ್ವಾಮಿ ಮಗನಿಗೆ ಕುಟುಂಬದವರು ಯಾವ ಹೆಸರನ್ನು ಇಡಲಿದ್ದಾರೆ ಕಾದು ನೋಡಬೇಕಿದೆ.
