3
Renukaswamy Wife: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದಾಗ ಸಹನಾ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಅವರ ಮನೆಗೆ ಗಂಡು ಮಗು ಬಂದಿದ್ದು, ಕುಟುಂಬವು ಖುಷಿ ಪಟ್ಟಿದೆ.
ರೇಣುಕಾಸ್ವಾಮಿ ಬರ್ಬರ ಹತ್ಯೆ ಬಳಿಕ ನಟ ದರ್ಶನ್ ಜೊತೆಗೆ ಈತನ ಗ್ಯಾಂಗನ್ನು ಪೊಲೀಸರು ಜೂನ್ 11 ರಂದು ಬಂಧನ ಮಾಡಿತ್ತು. ಕಳೆದ ನಾಲ್ಕು ತಿಂಗಳಿನಿಂದ ಜೈಲಿನಲ್ಲಿಯೇ ದರ್ಶನ್ ಇದ್ದಾರೆ. ಜಾಮೀನಿಗೆ ಅರ್ಜಿ ಹಾಕಿದ್ದು, ಕೆಳ ಹಂತದ ಕೋರ್ಟ್ ದರ್ಶನ್ ಅರ್ಜಿಯನ್ನು ತಿರಸ್ಕಾರ ಮಾಡಿದ್ದು, ಇದೀಗ ಹೈಕೋರ್ಟ್ ಮೊರೆ ಹೋಗಲಿದ್ದಾರೆ ದರ್ಶನ್.
