Home » India-Bangla Border: ಭಾರತ-ಬಾಂಗ್ಲಾ ಗಡಿಯಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಯ ಬಂಧನ !! ಅಲ್ಲಿ ಅವರು ಮಾಡುತ್ತಿದ್ದಿದ್ದೇನು?

India-Bangla Border: ಭಾರತ-ಬಾಂಗ್ಲಾ ಗಡಿಯಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಯ ಬಂಧನ !! ಅಲ್ಲಿ ಅವರು ಮಾಡುತ್ತಿದ್ದಿದ್ದೇನು?

1 comment
India-Bangla Border

India-Bangla Border: ಬಾಂಗ್ಲಾದೇಶದ ನಿವೃತ್ತ ನ್ಯಾಯಮೂರ್ತಿಯೊಬ್ಬರು ಭಾರತಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ವೇಳೆ ಈಶಾನ್ಯ ಗಡಿ ಭಾಗದ ಸಿಲೆಟ್‌ ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ‘ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ್‘ (ಬಿಜಿಬಿ) ಶುಕ್ರವಾರ ಹೇಳಿದೆ.

ಹೌದು, ಭಾರತಕ್ಕೆ ಪಲಾಯಾನ ಮಾಡಲೆತ್ನಿಸುತ್ತಿದ್ದ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಮೇಲ್ಮನವಿ ವಿಭಾಗದ ನಿವೃತ್ತ ನ್ಯಾಯಮೂರ್ತಿ ಸಂಶುದ್ದೀನ್ ಚೌದರಿ ಮಾಣಿಕರ್‌ರನ್ನು(Samshudhin Chowdhury Manik) ಈಶಾನ್ಯ ಭಾಗದ ಸಿಲೆಟ್‌ನ ಕನಾಯಘಾಟ್‌ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್’ ವರದಿ ಮಾಡಿದೆ.

ಅವಾಮಿ ಲೀಗ್ ನಾಯಕ ಎಎಸ್‌ಎಂ ಫಿರೋಝ್ ಅವರನ್ನು, ಅವರ ನಿವಾಸದಿಂದ ಬಂಧಿಸಿದ ನಂತರ ಈ ವರದಿ ಬಂದಿದೆ. ಬಿಜಿಬಿ ಪ್ರಧಾನ ಕಚೇರಿಯು ಎಸ್‌ಎಂಎಸ್‌ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಸಿಲ್ಹೆಟ್‌ನ ಕನೈಘಾಟ್ ಗಡಿಯ ಮೂಲಕ ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಶಂಸುದ್ದೀನ್ ಚೌಧರಿ ಮಾಣಿಕ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ. ಮಾಣಿಕ್ ಅವರನ್ನು ಮಧ್ಯರಾತ್ರಿಯವರೆಗೆ ಬಿಜಿಬಿ ಹೊರಠಾಣೆಯಲ್ಲಿ ಇರಿಸಲಾಗಿತ್ತು ಪ್ರಥಮ್ ಅಲೋ ಪತ್ರಿಕೆ ಹೇಳಿದೆ.

ಅಂದಹಾಗೆ ಮೀಸಲಾತಿ ಸಂಬಂಧ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಆ.5ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದೇಶದಿಂದಲೇ ಪಲಾಯಾನ ಮಾಡಿದ್ದರು. ಇದಾದ ಬಳಿಕ ಪ್ರತಿಭಟನಾಕಾರರು ಮಾಜಿ ಪ್ರಧಾನಿಯ ನಿವಾಸಕ್ಕೆ ದಾಳಿ ಮಾಡಿದ್ದರು.

You may also like

Leave a Comment