Home » Rifle Scope: ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ

Rifle Scope: ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ

0 comments

Rifle Scope: ‌ಜಮ್ಮು-ಕಾಶ್ಮೀರದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಪ್ರಧಾನ ಕಚೇರಿ ಬಳಿಯ ಕಸದ ತೊಟ್ಟಿಯೊಂದರಲ್ಲಿ ಚೀನಾ ನಿರ್ಮಿತ ಅಸಾಲ್ಟ್‌ ರೈಫಲ್‌ ಸ್ಕೋಪ್‌ (Chinese Made Rifle Scope) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜಮ್ಮುವಿನ ಅಸ್ರಾರಾಬಾದ್‌ನಲ್ಲಿ (Asrarabad) 6 ವರ್ಷದ ಮಗುವೊಂದು ಸ್ನೈಪರ್‌ಗೆ ಬಳಸುವ ರೈಫಲ್‌ ಸ್ಕೋಪ್‌ ಹಿಡಿದು ಆಟವಾಡುತ್ತಿದ್ದದ್ದು ಕಂಡುಬಂದಿದೆ.

ಬಳಿಕ ಪೊಲೀಸರು ಆ ಮಗುವಿನ ಕುಟುಂಬಸ್ಥರ ವಿಚಾರಣೆ ನಡೆಸಿದಾಗ, ಕಸದ ತೊಟ್ಟಿ ಬಳಿ ಮಗುವಿಗೆ ಸಿಕ್ಕಿದ್ದು ಅಂತ ಅವರು ಹೇಳಿದ್ದಾರೆ. ಈ ಸ್ಕೋಪ್‌ ಅನ್ನು ದೂರದ ಗುರಿಗಾಗಿ ಸ್ನೈಪರ್‌ ರೈಫಲ್‌ಗಳಿಗೆ (Sniper Rifle) ಬಳಸುತ್ತಾರೆ. ಇದು ಚೀನಾದ ಸ್ನೈಪರ್ ರೈಫಲ್‌ ಸ್ಕೋಪ್‌ ಅನ್ನೋದು ತಿಳಿಯುತ್ತಿದ್ದಂತೆ ಪೊಲೀಸ್‌ (Jammu Police) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.

ಸ್ಕೋಪ್‌ ಪತ್ತೆಯಾದ ಸ್ಥಳಕ್ಕೆ ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿಗಳೂ ಭೇಟಿ ನೀಡಿದ್ದಾರೆ. ಮಹತ್ವದ ಬೆಳವಣಿಗೆ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೂ ರೈಫಲ್‌ ಸ್ಕೋಪ್‌ ಪತ್ತೆಯಾದ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ಘಟನೆಗೆ ಸಂಬಂಧಿಸಿದಂತೆ ಸಾಂಬಾ ಜಿಲ್ಲೆಯಲ್ಲಿ 24 ವರ್ಷದ ಓರ್ವ ಯುವಕನನ್ನ ಬಂಧಿಸಲಾಗಿದೆ. ತನ್ವೀರ್ ಅಹ್ಮದ್ ಬಂಧಿತ ಯುವಕ. ಆತನ ಫೋನ್‌ ಪರಿಶೀಲಿಸಿದಾಗ ಪಾಕಿಸ್ತಾನಿ ಮೊಬೈಲ್‌ ಸಂಖ್ಯೆಗಳು ಇರುವುದು ಗೊತ್ತಾಗಿದೆ ಎಂದು ವರದಿಯಾಗಿದೆ.ಅಹ್ಮದ್ ಮೂಲತಃ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ನಿವಾಸಿಯಾಗಿದ್ದು, ಪ್ರಸ್ತುತ ಸಾಂಬಾದಲ್ಲಿ ವಾಸಿಸುತ್ತಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

You may also like