1
Rikki Rai: ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗಲು ರಿಕ್ಕಿ ರೈ 20 ದಿನಗಳ ಕಾಲಾವಕಾಶ ಕೇಳಿದ್ದು, ಮೆಡಿಕಲ್ ರಿಪೋರ್ಟ್ ಕೊಟ್ಟು ಸಮಯಾವಕಾಶ ಕೇಳಿದ್ದಾರೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ಕೆಲವೊಂದು ರಿಪೋರ್ಟ್‌ಗಳು ಬರಬೇಕಾಗಿದೆ. ಎಲ್ಲಾ ವರದಿಗಳು ಬಂದ ನಂತರ ಚಾರ್ಜ್‌ಶೀಟ್ ಫೈಲ್ ಮಾಡುತ್ತೇವೆ. ಜೊತೆಗೆ ರಿಕ್ಕಿ ರೈಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ. ಅವರು ಬಂದ ನಂತರ ತನಿಖೆ ಮುಂದುವರಿಸುತ್ತೇವೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ವಿಠಲ್ ಪ್ರಮುಖ ಆರೋಪಿಯಾಗಿದ್ದು, ಆತನ ದಸ್ತಗಿರಿ ಆಗಿ, ಜೈಲಿಗೆ ಕಳುಹಿಸಲಾಗಿದೆ. ಕೆಲವೊಂದು ಸಾಕ್ಷ್ಯಾಧಾರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಲಾಗಿದೆ. ಸದ್ಯಕ್ಕೆ ವಿಠಲ್ ಒಬ್ಬನೇ ಕೇಸ್‌ನಲ್ಲಿ ಆರೋಪಿಯಾಗಿದ್ದು, ರಿಕ್ಕಿ ರೈ ವಿಚಾರಣೆಗೆ ಬಂದ ನಂತರ ಬಳಿಕ ಮತ್ತಷ್ಟು ವಿಚಾರಗಳು ಹೊರಬರಲಿದೆ ಎಂದು ತಿಳಿಸಿದರು.
