Home » Rikky Rai: ರಿಕ್ಕಿ ರೈ ಶೂಟ್ ಪ್ರಕರಣ: 6 ತಾಸು ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ವಿಚಾರಣೆ!

Rikky Rai: ರಿಕ್ಕಿ ರೈ ಶೂಟ್ ಪ್ರಕರಣ: 6 ತಾಸು ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ವಿಚಾರಣೆ!

0 comments

Rikky Rai: ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣದ 2ನೇ ಆರೋಪಿ ಅನುರಾಧ ರೈ ಅವರನ್ನು ಪೊಲೀಸರು ಭಾನುವಾರ ಸತತ 6ಗಂಟೆ ಕಾಲ ವಿಚಾರಣೆ ನಡೆಸಿದರು.

ಬಿಡದಿ ಪೊಲೀಸ್‌ ಠಾಣೆಗೆ ಆಗಮಿಸಿದ ಅನುರಾಧ ರೈ ಅವರನ್ನು ವಿಚಾರಣೆ ನಡೆಸಿ ಅವರಿಂದ ಹೇಳಿಕೆ ದಾಖಲಿಸಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಧ ರೈ, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಅವರ ಮೇಲೆ ನಂಬಿಕೆ ಇದೆ. ಕೃತ್ಯದ ಹಿಂದೆ ಯಾರಿದ್ದಾರೊ, ಯಾರು ಮಾಡಿದ್ದಾರೊ ಅವರಿಗೆ ಶಿಕ್ಷೆ ಆಗಬೇಕು. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ ಎಂದರು, ಈ ಹಿಂದೆ ಜಮೀನು ವಾಜ್ಯ ಇತ್ತು. ಅದು ರಾಜಿ ಆಗಿದೆ. ನ್ಯಾಯಾಲಯದಲ್ಲಿಯೇ ಕೇಸು ಸುಖಾಂತ್ಯವಾಗಿ ಮುಗಿದಿದೆ. ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದರು.

You may also like