15
Hasana: ನಗರದ ಹೊರವಲಯದಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಧರ್ಮಸ್ಥಳಕ್ಕೆ ಪಾದಯಾತ್ರೆಗೆಂದು ಹೊರಟಿದ್ದ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆಯ ಇಬ್ಬರು ಭಕ್ತರು ಮೃತ ಹೊಂದಿದ್ದು, ಇನ್ನೊಬ್ಬ ಭಕ್ತನ ಸ್ಥಿತಿ ಗಂಭಿರವಾಗಿದೆ.
ಹಾಸನ ನಗರದ ಹೊರ ವಲಯದ ಎಚ್‌ಕೆಎಸ್ ಇಂಟರ್‌ನ್ಯಾಷನಲ್ ಶಾಲೆ ಬಳಿ ಈ ಘಟನೆ ನಡೆದಿದೆ. ಮಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಪಾದಯಾತ್ರಿಗಳ ಮೇಲೆ ಹರಿದಿದೆ. ಗಾಬರಿಗೊಂಡ ಚಾಲಕ ಪ್ರಯಾಣಿಕರನ್ನು ಬಸ್‌ನಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಹಾಸನ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ, ಬಸ್ ಜಪ್ತಿ ಮಾಡಿದ್ದಾರೆ. ಹಾಗೆನೇ ಚೆನ್ನೈಗೆಂದು ಹೋಗಬೇಕಿದ್ದ ಪ್ರಯಾಣಿಕರಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
