Home » ನಡು ರಸ್ತೆಯಲ್ಲೇ ಪತ್ನಿಯ ಮೇಲೆ ಮಚ್ಚು ಬೀಸಿದ ಪತಿ!! ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಮಹಿಳೆಯ ಪ್ರಾಣ

ನಡು ರಸ್ತೆಯಲ್ಲೇ ಪತ್ನಿಯ ಮೇಲೆ ಮಚ್ಚು ಬೀಸಿದ ಪತಿ!! ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಮಹಿಳೆಯ ಪ್ರಾಣ

0 comments

ಪತಿಯೊಂದಿಗೆ ಮುನಿಸಿಕೊಂಡು ತವರು ಮನೆಗೆ ಹೊರಟಿದ್ದ ಪತ್ನಿಯನ್ನು ಹಿಂಬಾಲಿಸಿದ ಪತಿ ಮಹಾಶಯನೊಬ್ಬ ನಡು ರಸ್ತೆಯಲ್ಲೇ ಆಕೆಯನ್ನು ಕೊಚ್ಚಿ ಕೊಲೆ ಮಾಡಲು ಮುಂದಾಗಿದ್ದು, ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿಯೊಬ್ಬರ ಸಮಯಪ್ರಜ್ಞೆಯಿಂದ ಆಕೆಯ ಜೀವ ಉಳಿದ ಘಟನೆ ಶಿರಾ ತಾಲೂಕಿನಲ್ಲಿ ನಡೆದಿದೆ.

ಘಟನೆಯಲ್ಲಿ ಹಲ್ಲೆಗೊಳಗಾದ ಮಹಿಳೆಯನ್ನು ಜ್ಯೋತಿ(25)ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಬಾಲು ಎಂಬಾತ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.

ಇಬ್ಬರೂ ದಂಪತಿಗಳಾಗಿದ್ದು, ಇತ್ತೀಚಿಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಪತ್ನಿ ಜ್ಯೋತಿ ತವರು ಮನೆಗೆ ಹೊರಟಿದ್ದಳು.ಇದರಿಂದ ಕುಪಿತಗೊಂಡ ಬಾಲು, ಆಕೆಯನ್ನು ಹಿಂಬಾಲಿಸಿ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ರೌಂಡ್ಸ್ ನಲ್ಲಿದ್ದ ಸ್ಥಳೀಯ ಠಾಣಾ ಎ.ಎಸ್.ಐ ಗೋವಿಂದರಾಜು ಹಾಗೂ ಸಿಬ್ಬಂದಿ ಮಹೇಶ್ ಮಹಿಳೆಯನ್ನು ಆತನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದೆ.

You may also like

Leave a Comment