Home » Kokkada: ಮಳೆಯ ನಡುವೆಯೂ ಮುಂದುವರೆದ ರಸ್ತೆ ರಿಪೇರಿ ಕಾರ್ಯ ! ಕೊಕ್ಕಡ – ಪಟ್ರಮೆ- ಮುಂಡೂರು ಪಲಿಕೆ (KPM) ಗೆಳೆಯರಿಂದ ಶ್ರಮದಾನ !

Kokkada: ಮಳೆಯ ನಡುವೆಯೂ ಮುಂದುವರೆದ ರಸ್ತೆ ರಿಪೇರಿ ಕಾರ್ಯ ! ಕೊಕ್ಕಡ – ಪಟ್ರಮೆ- ಮುಂಡೂರು ಪಲಿಕೆ (KPM) ಗೆಳೆಯರಿಂದ ಶ್ರಮದಾನ !

by ಹೊಸಕನ್ನಡ
0 comments

 

Kokkada: ಕೊಕ್ಕಡದಲ್ಲಿ (Kokkada) KPM ಗೆಳೆಯರು ಸ್ವತಃ ರೋಡ್ ರಿಪೇರಿಗೆ ಇಳಿದಿದ್ದು, ನಿನ್ನೆ ಪಟ್ಟೂರುನಿಂದ ಕೊಕ್ಕಡ ತನಕ ಡಾಮರು ರೋಡ್ ನಲ್ಲಿರುವ ಗುಂಡಿಗಳಿಗೆ ಕಾಂಕ್ರೀಟ್ ಹಾಕುವ
ಕೆಲಸ ಮಾಡಿದ್ದು, ರೋಡ್ ನಲ್ಲಿರುವ ಎಲ್ಲಾ ಗುಂಡಿಗಳಲ್ಲಿ ತಮಗಾಗುವಷ್ಟು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.

ಇವತ್ತು ಕೂಡ ಈ ಕೆಲಸ ಮುಂದುವರೆಸಿದ್ದು, ಕೊಕ್ಕಡ – ಪಟ್ರಮೆ- ಮುಂಡೂರು ಪಲಿಕೆ (KPM) ಗೆಳೆಯರಿಂದ ಶ್ರಮದಾನ ನಡೆದಿದೆ.
ಸುಮಾರು 9km ಉದ್ದದ ರಸ್ತೆಯಲ್ಲಿ ಇದ್ದ ಗುಂಡಿಗಳನ್ನು 2 ದಿನ kpm ಗೆಳೆಯರ ಟೀಮ್ ಸೇರಿ ಕಾಂಕ್ರೀಟ್ ಹಾಕುವ ಮೂಲಕ ಸರಿಪಡಿಸಿದರು.

ಆದರೆ, ಕೆಲಸದ ವೇಳೆ ಮಳೆ ಜೋರಾಗಿ ಇತ್ತು. ಹಾಗಾಗಿ ಕೆಲಸ ಮಾಡಲು ಅಡಚಣೆ ಆಗಿದೆ. ಕಾಂಕ್ರೀಟ್ ಹಾಕಿದ ಮೇಲೆ ಮಳೆ ಬಂದಿದ್ದು, ಇದರಿಂದಾಗಿ ಕೆಲವು ಕಡೆ ಮಾಡಿದ ಕೆಲಸಕ್ಕೆ ತೊಂದರೆಯಾಗಿದೆ‌. ಆದರೂ ಮಳೆಯ ನಡುವೆಯೂ
ರಸ್ತೆ ರಿಪೇರಿ ಕಾರ್ಯ ಮಾಡಿದ್ದಾರೆ. ಕೆಲಸವನ್ನು ಕೊಕ್ಕಡ ಟೌನ್ ತನಕ ಮಾಡಲಾಗಿದೆ‌.

ಇವತ್ತಿನ ಗುಂಡಿ ಮುಚ್ಚುವ ಕೆಲಸದಲ್ಲಿ ಹಲವರು ಸಹಕರಿಸಿದ್ದಾರೆ.‌
ಗಣೇಶ್ ಕಲಾಯಿ, ಅಶೋಕ್, ಬಾಬು, ಸುರೇಶ್ ಕಲಾಯಿ, ಲೇಕಾನಂದ ಬಾಳ್ತಿಮಾರು, ಸಂತೋಷ್ ಬದಿಜಲು, ಸಚಿನ್ ಬಜ, ಚರಣ್ ಶೆಟ್ಟಿ ಉಪ್ಪಾರಪಲಿಕೆ, ದಿನೇಶ್ ಶೆಟ್ಟಿ ಪಟ್ಟುರು, ಹರ್ಶಿತ್ ಶಿಬಂತಿ ಇವರೆಲ್ಲಾ ಈ ಉತ್ತಮ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಕೆಲಸದ ನೇತತ್ವ ವನ್ನು ಗಣೇಶ್ ಗೌಡ ಕಲಾಯಿ ಇವರು ವಹಿಸಿ ಕೊಂಡರು. ಸದ್ಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಊರವರಿಂದ ಶ್ಲಾಘನೆ ವ್ಯಕ್ತವಾಗಿದೆ.

You may also like

Leave a Comment