Home » ಮಣಿಪಾಲ : ಒಂಟಿ ಮಹಿಳೆಯ ಮೇಲೆ ರಾತ್ರಿ ಹೊತ್ತು ಮನೆಗೆ ನುಗ್ಗಿ ಚೂರಿ ಇರಿತ| ದರೋಡೆ ಮಾಡಿ ಓಡಲೆತ್ನಿಸಿದವರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

ಮಣಿಪಾಲ : ಒಂಟಿ ಮಹಿಳೆಯ ಮೇಲೆ ರಾತ್ರಿ ಹೊತ್ತು ಮನೆಗೆ ನುಗ್ಗಿ ಚೂರಿ ಇರಿತ| ದರೋಡೆ ಮಾಡಿ ಓಡಲೆತ್ನಿಸಿದವರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

0 comments

ಮಣಿಪಾಲದಲ್ಲಿ ಹಾಲಿನ ಬೂತ್ ನ ವ್ಯಾಪಾರ ಮಾಡುತ್ತಿರುವ ರಮಾನಂದ ಪೈ ಅವರ ಪತ್ನಿ ಸುಮತಿ ರೈ ಅವರು ರಾತ್ರಿ ( ಫೆ.18) ಮನೆಯಲ್ಲಿ ದೇವರ ಭಜನೆ ಮಾಡುತ್ತಿರುವ ಸಂದರ್ಭದಲ್ಲಿ ಮನೆಗೆ ನುಗ್ಗಿದ ದರೋಡೆಕೋರರು ಸುಮತಿ ಅವರಿಗೆ ಚೂರಿಯಿಂದ ಇರಿದು ಅನಂತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿಕೊಂಡು ಮಾಡಿದ್ದಾರೆ.

ಗಾಯಗೊಂಡ ಸುಮತಿಯವರನ್ನು ಪೆಟ್ಟಿಗೆಯೊಳಗೆ ತುಂಬಿಸಲು ಯತ್ನ ಮಾಡುತ್ತಿದ್ದಾಗ ಅವರ ಪತಿ ಮನೆಗೆ ಬರುತ್ತಾರೆ. ಕೂಡಲೇ ಅವರಿಗೆ ಪರಿಸ್ಥಿತಿಯ ಅರಿವಾಗಿ ಅವರನ್ನು ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ. ಈ ಸಮಯದಲ್ಲಿ ಸ್ಥಳೀಯರು ಕೂಡಾ ಬೊಬ್ಬೆ ಕೇಳಿ ಮನೆಗೆ ಬಂದಿದ್ದಾರೆ. ದರೋಡೆಕೋರರು ಕಾಲ್ಕಿತ್ತಲು ಪ್ರಯತ್ನಿಸಿದಾಗ ಅವರನ್ನು ಹಿಂಬಾಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆನ್ನಲಾಗಿದೆ.

ಈ ಘಟನೆ ಮಣಿಪಾಲ ಪೊಲೀಸ್ ಠಾಣ ವ್ಯಾಪ್ತಿಯ ಅನಂತನಗರ ಹುಡ್ಕೋ ಕಾಲೋನಿಯಲ್ಲಿ ನಡೆದಿದೆ.

ಸುಮತಿ ಅವರಿಗೆ ಚೂರಿ ಇರಿತದಿಂದ ತೀವ್ರವಾದ ಗಾಯ ಉಂಟಾಗಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌‌.

You may also like

Leave a Comment