Mangaluru : ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಈ ಬೆನ್ನಲ್ಲೇ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಇದು ಗ್ರಾಹಕರಿಗೆ ನಿರಾಳವನ್ನುಂಟು ಮಾಡಿದೆ.
ಹೌದು, ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಕೋಟೆಕಾರು ಬ್ಯಾಂಕ್ ಕೆ ಸಿ ರೋಡ್ ಶಾಖೆಗೆ ನೀಲಿ ಫಿಯಟ್ ಕಾರಿನಲ್ಲಿ ಆಗಮಿಸಿದ ಐವರು ಖದೀಮರ ತಂಡ ಭಾರೀ ದರೋಡೆ ನಡೆಸಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರು ಬಂದೂಕು ತೋರಿಸಿ ಹಣ ದೋಚಿದ್ದು, ಈ ವೇಳೆ 12 ಕೋಟಿಗೂ ಅಧಿಕ ಹಣ ದರೋಡೆ ಮಾಡಿದ್ದಾರೆ. ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿ ದರೋಡೆ ಮಾಡಲಾಗಿದೆ ಎನ್ನಲಾಗಿದ್ದು, ಪಕ್ಕಾ ಪ್ಲ್ಯಾನ್ ಮಾಡಿ ದರೋಡೆಕೋರರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಗ್ರಾಹಕರು ಕಂಗಾಲಾಗಿದ್ದರು. ಈ ಕುರಿತಾಗಿ ಬ್ಯಾಂಕ್ ಅಧ್ಯಕ್ಷರು ತನ್ನ ಗ್ರಾಹಕರಿಗೆ ಭರವಸೆಯೊಂದನ್ನು ನೀಡಿದ್ದಾರೆ
ಬ್ಯಾಂಕ್ ಅಧ್ಯಕ್ಷರು ಹೇಳಿದ್ದೇನು?
ಈ ಪ್ರಕರಣವಾದ ಬಳಿಕ ಬ್ಯಾಂಕ್ನಲ್ಲಿ ಠೇವಣಿ ಇಟ್ಟವರು ಹಾಗೂ ಚಿನ್ನ ಅಡವಿಟ್ಟವರು ಆತಂಕಗೊಂಡಿದ್ದಾರೆ. ನಮ್ಮ ಠೇವಣಿ ಹಣ ವಾಪಸ್ ಬರುತ್ತೋ ಇಲ್ಲೋ ಎನ್ನುವ ಆತಂಕದಲ್ಲಿದ್ದರೆ, ಇನ್ನು ಚಿನ್ನ ಗಿರಿವಿ ಇಟ್ಟ ಮಾಲೀಕರು ಸಹ ಚಿಂತೆ ಮಾಡುತ್ತಿದ್ದಾರೆ. ಇನ್ನು ಇದೀಗ ಗ್ರಾಹಕರ ಬಗ್ಗೆ ಕೋಟೆಕಾರು ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯಿಸಿದ್ದು, 19 ಕೋಟಿಯಷ್ಟು ಇನ್ಯೂರೆನ್ಸ್ ಇದೆ, ಗ್ರಾಹಕರು ಗಾಬರಿ ಆಗಬೇಕಿಲ್ಲ. ಇನ್ಯೂರೆನ್ಸ್ ಸಂಸ್ಥೆಯವರು ಎಲ್ಲಾ ಸರಿ ಮಾಡೋಣವೆಂದು ಹೇಳಿ ಹೋಗಿದ್ದಾರೆ. ಗ್ರಾಹಕರಿಗೆ ಅವರ ಮೊತ್ತ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
