Home » Rahul Gandhi ಸಾಯಿಬಾಬಾ ಇದ್ದಂತೆ – ರಾಬರ್ಟ್ ವಾದ್ರಾ

Rahul Gandhi ಸಾಯಿಬಾಬಾ ಇದ್ದಂತೆ – ರಾಬರ್ಟ್ ವಾದ್ರಾ

0 comments

ಚುನಾವಣೆಗೆ ಇನ್ನೇನು ಕೆಲ ತಿಂಗಳು ಬಾಕಿ ಇರುವಾಗಲೇ ಟೆಂಪಲ್ ರನ್ ಹಾಗೂ ಗ್ರಾಮೀಣ ಜಿಲ್ಲೆಗಳ ಭೇಟಿ ಮಾಡಿ ಊರಿನ ಜನರ ಮನವೊಲಿಸುವ ಪ್ರಯತ್ನ ನಡೆಸುವುದು ಸಾಮಾನ್ಯ ವಿಷಯ.

ಈ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಅವರ ಭಾವ, ಉದ್ಯಮಿ ರಾಬರ್ಟ್‌ ವಾದ್ರಾ ಅವರು ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ‘ಸಮಾನತೆಯನ್ನು ಭೋದಿಸಿದ ಆಧ್ಯಾತ್ಮಿಕ ನಾಯಕ ಸಾಯಿಬಾಬಾ ಅವರಂತೆ ರಾಹುಲ್‌ ಗಾಂಧಿಯವರ ಆಲೋಚನೆಗಳಿವೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಬಾಬಾ ಆಶೀರ್ವಾದ ರಾಹುಲ್‌ ಮೇಲಿರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ. ಭಾನುವಾರ ಇಲ್ಲಿನ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದ ವಾದ್ರಾ, ಕಾಂಗ್ರೆಸ್‌ ನ ನಾಯಕ ರಾಹುಲ್‌ ಗಾಂಧಿಯವರನ್ನು ಶಿರಡಿಯ ಆಧ್ಯಾತ್ಮಿಕ ಚಿಂತಕ ಸಾಯಿಬಾಬಾ ಅವರಿಗೆ ಹೋಲಿಕೆ ಮಾಡಿದ್ದಾರೆ.

ಇದಷ್ಟೇ ಅಲ್ಲದೇ, ‘ಸಮಾನತೆಯನ್ನು ಭೋದಿಸಿದ ಆಧ್ಯಾತ್ಮಿಕ ನಾಯಕ ಸಾಯಿಬಾಬಾ ಅವರಂತೆ ರಾಹುಲ್‌ ಗಾಂಧಿಯವರ ಆಲೋಚನೆಗಳಿದ್ದು, ಬಾಬಾ ಆಶೀರ್ವಾದ ರಾಹುಲ್‌ ಮೇಲಿರಲಿ ಎಂದು ಆಶಿಸಿದ್ದಾರೆ.

ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆಯಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಯಾತ್ರೆಯಲ್ಲಿ ತೆಲಂಗಾಣದಲ್ಲಿ ಶಾಲಾ ಮಕ್ಕಳೊಂದಿಗೆ ನಡೆಯತ್ತಾ ಜೊತೆಗೆ ಓಡುತ್ತಾ ಗಮನ ಸೆಳೆದಿದ್ದಾರೆ.

ಈ ಸಂದರ್ಭ ಅವರ ಭದ್ರತಾ ಸಿಬ್ಬಂದಿ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಹಾಗೂ ಇನ್ನಿತರರು ಕೂಡ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಜನರನ್ನು ಒಲಿಸಿಕೊಂಡು ಚುನಾವಣಾ ರಣರಂಗದಲ್ಲಿ ರಯಭೇರಿ ಬಾರಿಸಲು ಕಾಂಗ್ರೆಸ್ ಕೂಡ ರಣತಂತ್ರ ಹೆಣೆಯಲು ಮುಂದಾಗಿದ್ದು, ಎಷ್ಟರ ಮಟ್ಟಿಗೆ ಈ ಯೋಜನೆಗಳು ಸಫಲವಾಗಲಿದೆ ಎಂದು ಕಾದು ನೋಡಬೇಕಾಗಿದೆ.

You may also like

Leave a Comment