Home » Robot Commits Suicide: ಕೆಲಸದ ಒತ್ತಡ; ಮೆಟ್ಟಿಲಿನಿಂದ ಹಾರಿ ರೊಬೋಟ್‌ ಆತ್ಮಹತ್ಯೆ

Robot Commits Suicide: ಕೆಲಸದ ಒತ್ತಡ; ಮೆಟ್ಟಿಲಿನಿಂದ ಹಾರಿ ರೊಬೋಟ್‌ ಆತ್ಮಹತ್ಯೆ

0 comments
Robot Commits Suicide

Robot Commits Suicide: ದಕ್ಷಿಣ ಕೊರಿಯಾದಲ್ಲಿ ರೋಬೋಟ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ರೋಬೋಟ್ ಇದ್ದಕ್ಕಿದ್ದಂತೆ ಕಚೇರಿಯ ಮೆಟ್ಟಿಲುಗಳ ಮೇಲಿಂದ ಜಿಗಿದಿರುವ ಘಟನೆ ನಡೆದಿದೆ.

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಜು.18 ರವರೆಗೆ ನ್ಯಾಯಾಂಗ ಬಂಧನ

ವಿಶ್ವದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲಿ ಕೆಲಸದ ಹೊರೆಯಿಂದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ರೊಬೋಟ್‌ ಕಚೇರಿಯ ಮೆಟ್ಟಿಲುಗಳ ಮೇಲಿನಿಂದ ಇದ್ದಕ್ಕಿದ್ದಂತೆ ಜಿಗಿದಿದ್ದು, ಇದರ ಯಾಂತ್ರಿಕ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಗುಮಿ ಸಿಟಿ ಕೌನ್ಸಿಲ್‌ನಲ್ಲಿ ಈ ಘಟನೆ ನಡೆದಿದೆ. ಈ ರೋಬೋಟ್‌ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು.

ಇದೀಗ ತನಿಖೆ ಆರಂಭವಾಗಿದ್ದ, ಕೆಳಗೆ ಬಿದ್ದ ನಂತರ ರೋಬೋಟ್ ಕೆಲಸ ಮಾಡುವುದನ್ನು ನಿಲ್ಲಿಸಿತು ಮತ್ತು ಹೆಚ್ಚು ಹಾನಿಯಾಗಿದೆ ಎಂದು ಕೌನ್ಸಿಲ್ ಹೇಳಿದೆ. ಕಟ್ಟಡದ ಎರಡನೇ ಮತ್ತು ಮೊದಲ ಮಹಡಿಗಳ ನಡುವೆ ರೋಬೋಟ್ ಪತ್ತೆಯಾಗಿದೆ.

ಆತ್ಮಹತ್ಯೆಗೂ ಮುನ್ನ ರೋಬೋಟ್ ಅದೇ ಸ್ಥಳದಲ್ಲಿ ಸುಳಿದಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರೋಬೋಟ್ ಮೇಲಿನಿಂದ ಬೀಳಲು ಕಾರಣವೇನು ಎಂದು ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ಈ ‘ರೊಬೊಟಿಕ್ ಅಸಿಸ್ಟೆಂಟ್’ ಅನ್ನು ರಚಿಸಿದ ಕ್ಯಾಲಿಫೋರ್ನಿಯಾ ಸ್ಟಾರ್ಟಪ್ ‘ಬೇರ್ ರೋಬೋಟಿಕ್ಸ್’ ಸಹ ಅದರ ತುಣುಕುಗಳನ್ನು ಪರಿಶೀಲಿಸುತ್ತಿದೆ. ಗುಮಿ ಸಿಟಿ ಕೌನ್ಸಿಲ್ ಅಧಿಕಾರಿಗಳ ಪ್ರಕಾರ, ರೋಬೋಟ್ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಿತ್ತು. ಅವರ ದೈನಂದಿನ ಕಾರ್ಯಗಳಲ್ಲಿ ದಿನನಿತ್ಯದ ದಾಖಲೆಗಳನ್ನು ತಲುಪಿಸುವುದು, ನಗರವನ್ನು ಪ್ರಚಾರ ಮಾಡುವುದು, ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡುವುದು ಇತ್ಯಾದಿ.

ರೋಬೋಟ್‌ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. X ನಲ್ಲಿ ಯಾರೋ ಅವರು ಕೆಲಸದಲ್ಲಿ ಓವರ್ಲೋಡ್ ಆಗಿದ್ದಾರೆ ಎಂದು ಹೇಳಿದ್ದಾರೆ. ಬಿಡುವು ಮತ್ತು ರಜಾದಿನಗಳಿಲ್ಲದೆ ಕೆಲಸ ಮಾಡುವುದರಿಂದ ಇದು ಸಂಭವಿಸಿದೆ ಎಂದು ಇನ್ನೊಬ್ಬರು ನೆಟ್ಟಿಗರು ಹೇಳಿದ್ದಾರೆ.

T20 World Cup 2024: ಟಿ20 ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾಕ್ಕೆ ಮೋದಿಯಿಂದ ಮರೆಯಲಾರದ ಉಡುಗೊರೆ!

You may also like

Leave a Comment