Rocking Star Yash: ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಗ್ಗೆ ಅವರ ಪರ್ಸನಲ್ ವಿಷಯವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ಪರ್ಸನಲ್ ವಿಚಾರವನ್ನ ಬಯಲಿಗೆಳೆದಿದ್ದು ಕೂಡ ಅವರ ಅಭಿಮಾನಿಗಳೇ ಅನ್ನೋದು ಮತ್ತೊಂದು ವಿಶೇಷ.
ಹೌದು, ಮೊಗ್ಗಿನ ಮನಸು ಮೂಲಕ ಕನ್ನಡಿಗರ ಹೃದಯ ಗೆದ್ದು, ಕೆ.ಜಿ.ಎಫ್ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದ ಸ್ಯಾಂಡಲ್ವುಡ್ನ ಈ ಲಕ್ಕಿ ಯಶ್ಗೆ ಲಕ್ಕಿ ನಂಬರ್ ಯಾವುದು ಅನ್ನೋದು ರೀವಿಲ್ ಆಗಿದೆ. ಅದೇ ಎಂಟರ ಗುಟ್ಟು.. ಸ್ಯಾಂಡಲ್ವುಡ್ ಲಕ್ಕಿಯ ಲಕ್ಕಿ ನಂಬರ್ 8, ಯಶ್‌ಗೂ 8ರ ಸಂಖ್ಯೆಗೂ ಇದೆ ವಿಶೇಷ ನಂಟು. ಅದೇನೆಂದು ನೋಡೋಣ ಬನ್ನಿ.
ಈಗಾಗಲೇ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ಮಾಡೋದಕ್ಕಾಗಿ ದೇವರ ಕೃಪೆ ಬೇಡಿ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದಾರೆ. ಇನ್ನು ಯಶ್ ಜನ್ಮ ದಿನಾಂಕ ಜನವರಿ 08. ಈಗ ಯಶ್ ಟಾಕ್ಸಿಕ್ ಶೂಟಿಂಗ್ ಶುರು ಮಾಡಿರೋದು ಕೂಡ 08ನೇ ತಾರೀಖಿನಂದೇ. ಹೀಗಾಗಿ 08ರ ಸಂಖ್ಯೆಯಲ್ಲಿಯೇ ಯಶ್ ಗೆಲುವಿನ ಗುಟ್ಟು ಅಡಗಿದೆ ಅನ್ನೋ ಟಾಕ್ ಶುರುವಾಗಿದೆ. ಒಟ್ನಲ್ಲಿ ಕೊನೆಗೂ ಯಶ್ ತಮ್ಮ ಹೊಸ ಕನಸು ‘ಟಾಕ್ಸಿಕ್’ ಚಿತ್ರೀಕರಣವನ್ನ ಶುರು ಮಾಡುತ್ತಿದ್ದಾರೆ ಅನ್ನೋದೇ ಯಶ್ ಫ್ಯಾನ್ಸ್ಗೆ ಸದ್ಯಕ್ಕೆ ಸಿಕ್ಕಿರೋ ಖುಷಿ ವಿಷಯವಾಗಿದೆ.
