Home » Nandi Hills: ನಂದಿ ಬೆಟ್ಟದಲ್ಲಿ ರೋಪ್‌ ವೇ: ಯಾವ ವ್ಯವಸ್ಥೆಗಳಿರುತ್ತೆ?

Nandi Hills: ನಂದಿ ಬೆಟ್ಟದಲ್ಲಿ ರೋಪ್‌ ವೇ: ಯಾವ ವ್ಯವಸ್ಥೆಗಳಿರುತ್ತೆ?

by ಹೊಸಕನ್ನಡ
0 comments

 

Nandi Hills: ನಂದಿ ಬೆಟ್ಟಕ್ಕೆ (Nandi Hills) ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರದಲ್ಲೇ ಆಕರ್ಷಕ ಕೇಬಲ್ ಕಾರ್ ಸವಾರಿ ಅನುಭವಿಸಲು ಅವಕಾಶ ಸಿಗಲಿದೆ.

2.9 ಕಿಲೋಮೀಟರ್ ಉದ್ದದ ರೋಪ್‌ ವೇ ಯೋಜನೆ (Ropeway Project) ಯಾವುದೇ ವಿಳಂಬವಿಲ್ಲದಿದ್ದರೆ, ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, 2027ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮೇಲಿನ ಟರ್ಮಿನಲ್‌ಗಾಗಿ ಅಗತ್ಯವಿರುವ ಸುಮಾರು 3.5 ಎಕರೆ ಖಾಸಗಿ ಭೂಮಿ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭೂಮಿಯನ್ನು ಹಸ್ತಾಂತರಿಸುವ ಸಾಧ್ಯತೆಯಿದೆ. ಕೆಳ ಟರ್ಮಿನಲ್‌ಗಾಗಿ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಲಾಗಿದೆ. ಉಳಿದ ಭೂಮಿಯನ್ನು ಪಡೆದ ನಂತರ ನಿರ್ಮಾಣ ಚುರುಕುಗೊಳ್ಳುವ ನಿರೀಕ್ಷೆಯಿದೆ. ಮೇಲ್ಭಾಗದ ಟರ್ಮಿನಲ್ ಸೈಟ್ ಭೂಮಿಯು ಖಾಸಗೀ ಮಾಲಿಕತ್ವದ್ದಾಗಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಡೈನಾಮಿಕ್ಸ್ ರೋಪ್‌ ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ಮಾಣ ಕಾರ್ಯ ಮುಂದುವರಿಯುವ ಮೊದಲು ವಿವಿಧ ಸರ್ಕಾರಿ ಇಲಾಖೆಗಳಿಂದ ಹಲವಾರು ಅನುಮೋದನೆಗಳು ಬೇಕಾಗುತ್ತವೆ. ಇವುಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಪರಿಸರ ಅನುಮತಿಯೂ ತೆಗೆದುಕೊಳ್ಳಬೇಕಾಗುತ್ತದೆ.

You may also like