Gadaga: ಗದಗ: ಗದಗ ಜಿಲ್ಲೆಯಾದ್ಯಂತ ಪುಡಿ ರೌಡಿ ಕಿರಿಕ್ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು ಮನೆಯಿಂದ ಆಚೆ ಓಡಾಡುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.
ನಿನ್ನೆ ತಡರಾತ್ರಿ ಗದಗ (Gadaga) ನಗರದ ಹಾತಲಗೇರಿ ರಸ್ತೆಯಲ್ಲಿನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬನಿಗೆ ದುರ್ಷ್ಕರ್ಮಿಗಳಿಂದ ರಾಡ್‌ನಿಂದ ಹಲ್ಲೆಗೈದು ಪರಾರಿಯಾದ ಘಟನೆಯೊಂದು ನಡೆದಿದೆ.
ಹಲ್ಲೆಗೊಳಲಾಗದ ಯುವಕ ಸಂಜೀವಪ್ಪ ಘಟನಾ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವ ಗೊಂಡಿದ್ದಾನೆ. ಸ್ಥಳೀಯರು ಗದಗದ ಜಿಮ್ಸ್ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಈತ ಪ್ರಾತೆಯ ವ್ಯಾಪಾರಿಯಾಗಿದ್ದನು. ಹಲ್ಲೆಗೊಂಡ ವಿಚಾರವೂ ತಿಳಿದು ಆಸ್ಪತ್ರೆಗೆ ಸಂಜೀವಪ್ಪ ಅವರ ಅಜ್ಜಿ ಬಂದಿದ್ದು ಕ್ರೂರವಾಗಿ ಹಲ್ಲೆಗೈದಿರುವುದನ್ನು ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ರಾತ್ರಿ ವೇಳೆಯಲ್ಲಿ ರಾಡ್, ಮುಚ್ಚು, ಚಾಕು ಹಿಡಿದು ಒಡಾಡುವ ಪುಡಿ ರೌಡಿಗಳ ಅಟ್ಟಗಾಸಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ
