Highcourt: ಪೊಲೀಸ್ ಅಧಿಕಾರಿಗಳು (Police officers) ರೌಡಿ ಶೀಟರ್‌ಗಳನ್ನು (Rowdy sheetars) ಕೇವಲ ಮೌಖಿಕವಾಗಿ ಠಾಣೆಗೆ ಕರೆಸಿ ಹೆಚ್ಚು ಸಮಯ ತಮ್ಮ ವಶದಲ್ಲಿ ಇರಿಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ (Highcourt) ತಿಳಿಸಿದೆ.
ಒಂದು ವೇಳೆ ಈ ರೀತಿ ಮಾಡಿದಲ್ಲಿ ಓರ್ವ ವ್ಯಕ್ತಿಯ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡಿದಂತೆ ಆಗಲಿದೆ ಎಂದು ಹೈಕೋರ್ಟ್ ಹೇಳಿದೆ. ಈ ಸಂಬಂಧ ರೌಡಿ ಶೀಟರ್ ಸೈಲೆಂಟ್ ಸುನೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ ಮತ್ತು ಈ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಬೇಕು ಎಂದು ಸೂಚನೆ ನೀಡಿದೆ.
ಕೇವಲ ರೌಡಿ ಶೀಟರ್ ಎಂಬ ಕಾರಣಕ್ಕೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಿದ್ದರೂ, ಶಂಕೆಯ ಆಧಾರದ ಮೇಲೆ ಮೌಖಿಕವಾಗಿ ಕರೆಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.ಆದ್ರೆ ಪೊಲೀಸರು ಮೌಖಿಕ ಸಮನ್ಸ್ ಬದಲಾಗಿ ಎಸ್‌ಎಂಎಸ್ ಅಥವಾ ವಾಟ್ಸ್ಆಯಪ್ ಸಂದೇಶ ಕಳುಹಿಸಿ ರೌಡಿ ಶೀಟರ್ ಗಳನ್ನು ಕರೆಸಿಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿದೆ. ಹೀಗೆ ತನಿಖಾಧಿಕಾರಿಗಳು ಮೊಬೈಲ್ ಸಂದೇಶ ರವಾನೆ ಮಾಡಿದ ಬಳಿಕವೂ ಠಾಣೆಗೆ ಹಾಜರಾಗದಿದ್ದಲ್ಲಿ ವಿಚಾರಣೆಗಾಗಿ ಅವರ ಮನೆಗೆ ಭೇಟಿ ನೀಡಬಹುದು ಎಂದು ಆದೇಶಿಸಿದೆ.ಈ ಹಿಂದೆ ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿ ಶೀಟರ್ ಸೈಲೆಂಟ್ ಸುನೀಲ್ನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸೈಲೆಂಟ್ ಸುನೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
