Varanasi: ವಾರಣಾಸಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ʼತಂದೆಯ ಪಾತ್ರʼ ನಿರ್ವಹಿಸಿ ಕನ್ಯಾದಾನ ಮಾಡಿರುವ ಘಟನೆ ನಡೆದಿದೆ.
ಬುಧವಾರ ಉತ್ತರಪ್ರದೇಶದ ವಾರಣಾಸಿಯಲ್ಲಿ ಶುಭ ಅಕ್ಷಯ ತೃತೀಯದ ಸಂದರ್ಭದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಭಾಗವಹಿಸಿದ್ದರು. ಸೋನ್‌ಭದ್ರ ಜಿಲ್ಲೆಯ ಜೋಗಿದಿಹ್ ಗ್ರಾಮದ ಬುಡಕಟ್ಟು ವಧುವಿನ ʼಕನ್ಯಾದಾನʼ ಮಾಡುವ ಮೂಲಕ ಭಾಗವತ್ ತಂದೆಯ ಪಾತ್ರ ನಿಭಾಯಿಸಿದ್ದು, 125 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜವಂತಿ ಎಂಬ ಬುಡಕಟ್ಟು ಮಹಿಳೆಯ ಕನ್ಯಾದಾನವನ್ನು ಭಾಗವತ್ ನೆರವೇರಿಸಿದರು. ವಧುವಿನ ಪಾದ ತೊಳೆದು, ಅವಳ ರಕ್ಷಕರಾಗಿ ಪ್ರತಿಜ್ಞೆ ಮಾಡಿ, ವೇದ ಮಂತ್ರಗಳ ಪಠಣದ ನಡುವೆ ಆಚರಣೆ ನಡೆಯಿತು. ರಾಜವಂತಿ ರೇಣುಕೂಟದ ಬುಡಕಟ್ಟು ಯುವಕ ಅಮನ್ ಎಂಬಾತನನ್ನು ವಿವಾಹವಾಗಿದ್ದು, ಭಾಗವತ್ ರಾಜವಂತಿಗೆ 501 ರೂ. ಸಾಂಕೇತಿಕ ಮದುವೆಯ ಉಡುಗೊರೆಯನ್ನು ನೀಡಿದ್ದಾರೆ.
