Home » RTC name checking: ನಿಮ್ಮ ಮೊಬೈಲ್ ಮೂಲಕ ನಿಮ್ಮ ಜಮೀನಿನ ಪಹಣಿ/ RTC ಈ ರೀತಿ ಚೆಕ್ ಮಾಡಿ!

RTC name checking: ನಿಮ್ಮ ಮೊಬೈಲ್ ಮೂಲಕ ನಿಮ್ಮ ಜಮೀನಿನ ಪಹಣಿ/ RTC ಈ ರೀತಿ ಚೆಕ್ ಮಾಡಿ!

0 comments
Agricultural Land

RTC name checking: ಕಳೆದ ಹಲವಾರು ವರ್ಷಗಳಿಂದ ತಮ್ಮ ತಾತ ಮುತ್ತಾತರ ಕಾಲದಿಂದ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿರುವಂತಹ ರೈತರಿಗೆ ವಕ್ಫ್ ಕಾಯ್ದೆ ಶಾಕ್ ನೀಡಿದೆ. ಹೌದು, ಇತ್ತೀಚಿಗೆ ಬಹುತೇಕರ ಭೂಮಿ ಪಟ್ಟಿಯಲ್ಲಿ ಜಮೀನು ವಕ್ಫ್ ಆಸ್ತಿ ಎಂದು ಬರುತ್ತಿದೆ. ಆದ್ದರಿಂದ ಎಲ್ಲರೂ ಮನೆಯಲ್ಲೆ ಕುಳಿತು ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ/ RTC ಚೆಕ್ ಮಾಡಿಕೊಳ್ಳುವ ವಿಧಾನ ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

ಎಷ್ಟೋ ಜನ ರೈತರಿಗೆ ಅವರಿಗೆ ತಿಳಿಯದೆ ಅವರ ಪಹಣಿ/ RTC ಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿರುತ್ತದೆ. ತಮ್ಮ ಪಹಣಿಯ ಸದ್ಯದ ಸ್ಥಿತಿ ಹೇಗೆ ತಿಳಿದುಕೊಳ್ಳಬೇಕು ಹಾಗೂ ಹೇಗೆ ಪರಿಶೀಲನೆ ಮಾಡಬೇಕು ಎಂದು ಇಲ್ಲಿದೆ ಮಾಹಿತಿ.

RTC name checking-ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ/ RTC ಚೆಕ್ ಮಾಡಿಕೊಳ್ಳುವ ವಿಧಾನ:

ಇಲ್ಲಿ ನೀಡಲಾದ ಲಿಂಕ್ ಮೂಲಕ (bhoomi RTC) ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನೋಡಬಹುದು.

bhoomi online land records ಈ ಒಂದು ಅದಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್ ಹಾಕಿ GO ಮೇಲೆ ಒತ್ತಬೇಕು ಮತ್ತು ನಂತರ ಹಿಸ್ಸಾ ನಮೂದು ಮಾಡಬೇಕು.fech details ಮೇಲೆ ಕ್ಲಿಕ್ ಮಾಡಿ view ಒತ್ತಿ ಸದ್ಯದ ಪಹಣಿ ಸ್ಥಿತಿ ನೋಡಬಹುದು. ಪಹಣಿಯಲ್ಲಿ 11 ನಂಬರ್ ಹಕ್ಕುಗಳು ಅದರಲ್ಲಿ ಚೆಕ್ ಮಾಡಬೇಕು.

You may also like

Leave a Comment