Home » ಶಬರಿಮಲೆ: ಏಳು ಪದರಗಳಿಂದ ಚಿನ್ನ ಲೂಟಿ!

ಶಬರಿಮಲೆ: ಏಳು ಪದರಗಳಿಂದ ಚಿನ್ನ ಲೂಟಿ!

0 comments

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರಪಾಲಕ ಶಿಲ್ಪ, ಬಾಗಿಲು ಚೌಕಟ್ಟಿನ ಪದರಗಳಿಗೆ ಲೇಪಿಸಿದ ಚಿನ್ನದ ಹೊರತಾಗಿ ಇನ್ನೂ ಏಳು ಪದರಗಳಿಂದ ಆರೋಪಿಗಳು ಚಿನ್ನ ಲೂಟಿ ಮಾಡಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ವಶಕ್ಕೆ ನೀಡುವಂತೆ ಕೋರಿ ಕೊಲ್ಲಂ’ ವಿಜಿಲೆನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಕಸ್ಟಡಿ ಅರ್ಜಿಯಲ್ಲಿ ಈ ಹೆಚ್ಚುವರಿ ಚಿನ್ನ ಲೂಟಿಯ ಆಘಾತಕಾರಿ ಮಾಹಿತಿಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ತಿಳಿಸಿದೆ.

ದೇಗುಲದ ಬಾಗಿಲು ಚೌಕಟ್ಟಿಗೆ ಜೋಡಿಸಲಾದ ಹತ್ತು ದೇವತೆಗಳಿದ್ದು ಅವತಾರಗಳನ್ನು ಒಳಗೊಂಡ ಎರಡು ತಾಮ್ರದ ಪದರ, ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಎರಡು ತಾಮ್ರದ ಪದರ, ಬಾಗಿಲು ಚೌಕಟ್ಟಿನ ಮೇಲ್ಬಾಗದಲ್ಲಿರುವ ತಾಮ್ರದ ಪದರ, ಶಿವ ಮತ್ತು ವ್ಯಾಲಿ ರೂಪಗಳನ್ನು ಒಳಗೊಂಡ ಪ್ರಭಾಮಂಡಲದ ತಾಮ್ರದ ಪದರ ಸಹಿತ ಏಳು ತಾಮ್ರದ ಪದರಗಳಿಗೆ ಹೊದಿಸಲಾದ ಚಿನ್ನ ಲೂಟಿ ಮಾಡಲಾಗಿದೆ ಎಂದು ಎಸ್‌ಐಟಿ ಹೇಳಿದೆ.

ಶಬರಿಮಲೆಯ ಚಿನ್ನ ಲೂಟಿ ಮಾಡುವ ಉದ್ದೇಶದಿಂದ ದೇವಸ್ವಂ ದಾಖಲೆಗಳಲ್ಲಿ ‘ಚಿನ್ನದ ಲೇಪಿತ ತಾಮ್ರದ ಪದರ’ ಎಂಬುದರ ಬದಲು ಕೇವಲ ‘ತಾಮ್ರದ ಪದರ’ ದಾಖಲಿಸಲಾಗಿದೆ.

You may also like