Home » safest cities in India: ದೇಶದ ಟಾಪ್ 10 ಸುರಕ್ಷಿತ ನಗರಗಳ ಪಟ್ಟಿ ಬಿಡುಗಡೆ

safest cities in India: ದೇಶದ ಟಾಪ್ 10 ಸುರಕ್ಷಿತ ನಗರಗಳ ಪಟ್ಟಿ ಬಿಡುಗಡೆ

by ಹೊಸಕನ್ನಡ
0 comments

Safest cities in India: ಭಾರತದ ನಗರಗಳಲ್ಲಿನ ಸುರಕ್ಷತಾ ಪರಿಸ್ಥಿತಿಗಳು, ಅಪರಾಧ ಪ್ರಮಾಣಗಳು, ಹಗಲು ಮತ್ತು ರಾತ್ರಿ ಜನರು ಎಷ್ಟು ಸುರಕ್ಷಿತರಾಗಿದ್ದಾರೆ, ಕಳ್ಳತನ, ಹಲ್ಲೆ, ಕಿರುಕುಳ, ಜನಾಂಗೀಯ ಮತ್ತು ಧಾರ್ಮಿಕ ತಾರತಮ್ಯದಂತಹ ಅಂಶಗಳನ್ನು ಆಧರಿಸಿ ನಂಬೊ ಸುರಕ್ಷತಾ ಸೂಚ್ಯಂಕವು ಪ್ರತಿ ವರ್ಷ ವಿಶ್ವದ ನಗರಗಳು ಮತ್ತು ದೇಶಗಳ ಸುರಕ್ಷತಾ ಶ್ರೇಯಾಂಕಗಳ ಪಟ್ಟಿಯನ್ನು ಪ್ರಕಟಿಸುತ್ತದೆ.

 

ಅಂತೆಯೇ 2025 ರಲ್ಲಿ, ಭಾರತವು ವಿಶ್ವದಲ್ಲಿ 67 ನೇ ಸ್ಥಾನದಲ್ಲಿದ್ದು, ಅದರ ಅಂಕ 55.8 ಆಗಿದೆ. ಇನ್ನು ಅಬುಧಾಬಿ ವಿಶ್ವದ ಸುರಕ್ಷಿತ ನಗರವಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅದರ ನಂತರ, ದೋಹಾ, ದುಬೈ, ಶಾರ್ಜಾ, ತೈಪೆ, ಮನಾಮ, ಮಸ್ಕತ್, ಹೇಗ್, ಟ್ರೋಂಡ್‌ಹೈಮ್ ಮತ್ತು ಐಂಡ್‌ಹೋವನ್ ಮೊದಲ ಹತ್ತರಲ್ಲಿವೆ.

 

1. ಭಾರತದ ಸುರಕ್ಷಿತ ಸ್ಥಳಗಳಲ್ಲಿ (safest cities in India) ಕರ್ನಾಟಕದ ಮಂಗಳೂರು ಮೊದಲ ಸ್ಥಾನದಲ್ಲಿದೆ.

2.ಗುಜರಾತ್‌ನ ವಡೋದರಾ ಎರಡನೇ ಸ್ಥಾನ.

3. ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.

4. ಸೂರತ್ ನಾಲ್ಕನೇ ಸ್ಥಾನ.

5. ಜೈಪುರ ಐದನೇ ಸ್ಥಾನದಲ್ಲಿದೆ.

6. ಮುಂಬೈ ಆರನೇ ಸ್ಥಾನ.

7. ಕೇರಳದ ತಿರುವನಂತಪುರಂ ಏಳನೇ ಸ್ಥಾನ.

8. ತಮಿಳುನಾಡಿನ ಚೆನ್ನೈ ಎಂಟನೇ ಸ್ಥಾನ.

9. ಮಹಾರಾಷ್ಟ್ರದ ಪುಣೆ ಒಂಬತ್ತನೇ ಸ್ಥಾನ.

10. ಚಂಡೀಗಢ ಹತ್ತನೇ ಸ್ಥಾನದಲ್ಲಿದೆ.

 

You may also like