Saina Nehwal: ವಿಚ್ಛೇದನ ಪಡೆಯಲು ಮುಂದಾಗಿದ್ದೇವೆ ಎಂದು ಘೋಷಿಸಿದ ಭಾರತದ ಸ್ಟಾರ್ ಕ್ರೀಡಾಪಟು ಸೈನಾ ನೆಹ್ವಾಲ್ ದಂಪತಿ ಇದೀಗ ಮತ್ತೆ ಒಂದಾಗಿದ್ದಾರೆ.
ಹೌದು, ಡಿವೋರ್ಸ್ ಪಡೆಯಲು ಮುಂದಾಗಿದ್ದೇವೆ ಎಂದು ಘೋಷಿಸಿದ್ದ ಭಾರತದ ಸ್ಟಾರ್ ಬ್ಯಾಂಡ್ಮಿಂಟನ್ ದಂಪತಿ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮತ್ತೆ ಒಂದಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.
ಈ ಕುರಿತಾಗಿ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತಾವು ಮತ್ತೆ ಒಂದಾಗುತ್ತಿದ್ದೇವೆ ಎಂದು ದೃಢಪಡಿಸಿದ್ದು “ಕೆಲವೊಮ್ಮೆ ದೂರವಾದಾಗಲೇ ಬೆಲೆ ತಿಳಿಯೋದು, ಅದು ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಕಳೆದ ಜುಲೈ 14ರಂದು ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಬ್ಯಾಡ್ಮಿಂಟನ್‌ನ ಪ್ರಸಿದ್ಧ ಜೋಡಿ 7 ವರ್ಷಗಳ ದಾಂಪತ್ಯ ಮತ್ತು 14 ವರ್ಷಗಳ ಸಂಬಂಧದ ನಂತರ ಬೇರ್ಪಡಲು ನಿರ್ಧರಿಸಿ ಅವರು ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬೇರ್ಪಡುವಿಕೆಯನ್ನು ದೃಢಪಡಿಸಿದ್ದರು. ಆದರೆ ಈಗ ಮತ್ತೆ ಒಂದಾಗಲು ನಿರ್ಧರಿಸಿದ್ದು ಈ ಮೂಲಕ ಮಾಧರಿಯಾಗಲು ಮುಂದಾಗಿದ್ದಾರೆ.
