Home » Sakalehapura: ಗರಿ ಕತ್ತರಿಸಲು ತೆಂಗಿನ ಮರವೇರಿ ಬಿಸಿಲಿಗೆ ಅಲ್ಲೇ ಪ್ರಜ್ಞೆ ತಪ್ಪಿದ ಯುವಕ !!

Sakalehapura: ಗರಿ ಕತ್ತರಿಸಲು ತೆಂಗಿನ ಮರವೇರಿ ಬಿಸಿಲಿಗೆ ಅಲ್ಲೇ ಪ್ರಜ್ಞೆ ತಪ್ಪಿದ ಯುವಕ !!

2 comments
Sakalehapura

Sakaleshapura: ಬಿಸಿಲ ಬೇಗೆ ಎಷ್ಟಿದೆ ಎಂದರೆ ಹೊರಗಡೆ ಕಾಲಿಡಲು ಕೂಡ ಆಗುತ್ತಿಲ್ಲ. ಬೆಳ್ಳಂಬೆಳಿಗ್ಗೆ ಸೂರ್ಯನ ಶಾಕ ಮೈಸುಡುವಂತಿದೆ. ಇನ್ನು ಮಧ್ಯಾಹ್ನದ ಹೊತ್ತಿಗಂತೂ ಕೇಳಲೇಬೇಡಿ. ಇದೀಗ ಯುವಕ ನೋಬ್ಬ ತೆಂಗಿನ ಗರಿಯನ್ನು ಕೀಳಲು ತಂಗಿನ ಮರವೇರಿ ಬಿಸಿಲ ಝಳಕ್ಕೆ ಮರದ ಮೇಲೆಯೇ ಪ್ರಜ್ಞೆ ತಪ್ಪಿದಂತಹ ಘಟನೆ ನಡೆದಿದೆ.

ಹೌದು, ಹಾಸನ ಜಿಲ್ಲೆ, ಸಕಲೇಶಪುರ(Sakaleshapura) ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದಲ್ಲಿ ಇಂತಹ ಒಂದು ಅಪರೂಪದ ಘಟನೆ ನಡೆದಿದೆ. ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸಲು ನವೀನ್ ಎಂಬಾತ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರವೇರಿದ್ದ. ತೆಂಗಿನ ಗರಿಗಳನ್ನು ಕತ್ತರಿಸಿ ಕೆಳಗೆ ಇಳಿಯುತ್ತಿರಬೇಕಾದರೆ ಮರದಲ್ಲಿಯೇ ನವೀನ್ ಪ್ರಜ್ಞೆ ತಪ್ಪಿದ್ದಾನೆ.

ಇದನ್ನೂ ಓದಿ: Men Health: ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರಗಳಿವು : ತಪ್ಪದೆ ಬಳಸಿ

ಇದನ್ನು ಗಮನಿಸಿದ ಮಂಜು(Manju) ಅವರು ಹಾಗೂ ಸ್ಥಳೀಯರು ಕೂಡಲೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಏಣಿ ಮೂಲಕ ಮರವೇರಿ, ಸೊಂಟಕ್ಕೆ ಹಗ್ಗ ಕಟ್ಟಿ ನವೀನ್‌ನನ್ನು ರಕ್ಷಿಸಿದ್ದಾರೆ. ಕೊನೆಗೆ ನವೀನ್ ಸಾವಿನ ದವಡೆಯಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾನೆ.

ಇದನ್ನೂ ಓದಿ: Seema Haider Viral Photo: ಸೀಮಾ ಹೈದರ್‌ಗೆ ಹಲ್ಲೆ; ವೀಡಿಯೋ ವೈರಲ್‌

You may also like

Leave a Comment