Home » ಕಾರು ಮತ್ತು ಬಸ್ಸಿನ ಮಧ್ಯೆ ಭೀಕರ ಅಪಘಾತ!! ದಂಪತಿಗಳಿಬ್ಬರು ಸ್ಥಳದಲ್ಲೇ ಮೃತ್ಯು!

ಕಾರು ಮತ್ತು ಬಸ್ಸಿನ ಮಧ್ಯೆ ಭೀಕರ ಅಪಘಾತ!! ದಂಪತಿಗಳಿಬ್ಬರು ಸ್ಥಳದಲ್ಲೇ ಮೃತ್ಯು!

0 comments

ಸಕಲೇಶಪುರ:ಇಲ್ಲಿನ ಕೊಲ್ಲಹಳ್ಳಿ ಎಂಬಲ್ಲಿಯ ರಸ್ತೆ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ದಂಪತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಜೂನ್ 17ರ ಶುಕ್ರವಾರ ಸಂಜೆ ಸಂಭವಿಸಿದೆ.

ಮೃತ ದಂಪತಿಗಳನ್ನು ಕುಣಿಗಲ್ ಗ್ರಾಮದ ನಿವಾಸಿಗಳಾದ ಚಂದ್ರಶೇಖರ್(55)ಹಾಗೂ ಶಾರದಾ(52)ಎಂದು ಗುರುತಿಸಲಾಗಿದೆ.ಸಕಲೇಶಪುರಪುರದಿಂದ ಹಾಸನದ ಕಡೆಗೆ ಸಂಚರಿಸುತ್ತಿದ್ದ ಬಸ್ಸು ಕೊಲ್ಲಹಳ್ಳಿ ತಿರುವಿನ ಸಮೀಪ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment