Salary : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತ ಜನರ ಕೈ ಸುಡುತ್ತಿದ್ದರೆ ಇತ್ತ ರಾಜ್ಯ ಸರ್ಕಾರವು ಶಾಸಕರ ಸಂಬಳವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.
ಹೌದು, ಕಲಾಪ ಸಲಹಾ ಸಮಿತಿಯಲ್ಲಿ ನಡೆದ BAC ಸಭೆಯಲ್ಲಿ ಶಾಸಕರ ಶೇ.50 ರಷ್ಟು ಸಂಬಳ ಹೆಚ್ಚಳ ಮಾಡಲು ನಿರ್ಣಯಿಸಲಾಗಿದೆ. ಕಳೆದ ಬಾರಿ ಅಧಿವೇಶನ ವೇಳೆ ಸಂಬಳ ಹೆಚ್ಚಳದ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಮಾತನಾಡಿದ್ದರು. ಇದೀಗ ಈ ಕುರಿತು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಶಾಸಕರ ಸಂಬಳ ಎಷ್ಟಿದೆ?
ಇದೀಗ ರಾಜ್ಯದ ಶಾಸಕರಾದವರಿಗೆ ಪ್ರಸ್ತುತ ಮಾಸಿಕ ವೇತನ 40,000 ರೂಪಾಯಿಗಳಷ್ಟಿದೆ. ಇದು ವೇತನ ಮಾತ್ರ ಆಗಿದ್ದು, ಇದರ ಹೊರತಾಗಿ ತಮ್ಮ ಕ್ಷೇತ್ರ ಪ್ರಯಾಣ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು 60,000 ರೂಪಾಯಿ, ಸಭೆಗೆ ಹಾಜರಾದರೆ 7,000 ರೂಪಾಯಿ, ದೂರವಾಣಿ, ಮೊಬೈಲ್ ಖರ್ಚಿಗಾಗಿ 20,000 ರೂಪಾಯಿ ಭತ್ಯೆ ಸಿಗುತ್ತದೆ. ಅಷ್ಟೇ ಅಲ್ಲದೆ, ವಾರ್ಷಿಕ ಪ್ರಯಾಣ ಭತ್ಯೆ 2.50 ಲಕ್ಷ ರೂಪಾಯಿ ಸಿಗುತ್ತದೆ.
