Home » Actor Upendra: ಜೀವನದಲ್ಲಿ ಅಪ್ಪನ ಹೆಸರು ಹೇಳಿ ಬದುಕಲ್ಲ ಎಂದ ಉಪ್ಪಿ ಮಗ! ಆದ್ರೆ ಉಪೇಂದ್ರ ರಿಯಾಕ್ಷನ್ ಏನು ಗೊತ್ತಾ?

Actor Upendra: ಜೀವನದಲ್ಲಿ ಅಪ್ಪನ ಹೆಸರು ಹೇಳಿ ಬದುಕಲ್ಲ ಎಂದ ಉಪ್ಪಿ ಮಗ! ಆದ್ರೆ ಉಪೇಂದ್ರ ರಿಯಾಕ್ಷನ್ ಏನು ಗೊತ್ತಾ?

0 comments

Actor Upendra: ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಕೆಲವೊಂದು ನಟ ನಟಿಯರ ಬಗ್ಗೆ ಕೆಲವು ವಿಷಯಗಳು ಚರ್ಚೆ ಆಗುತ್ತಲೇ ಇರುತ್ತೆ. ಇದೀಗ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ (Actor Upendr) ಕುಟುಂಬದಿಂದ ಪುತ್ರ ಆಯುಷ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗುತ್ತಿದ್ದಾರೆ. ಒಬ್ಬ ನಟನಾಗಲು ಆಯುಷ್ ತಯಾರಿ ಆಗುತ್ತಿದ್ದಾರೆ ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಆಯುಷ್ ಕೊಟ್ಟ ಉತ್ತರ ಸಖತ್ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಉಪ್ಪಿ ಏನ್ ಹೇಳ್ತಾರೆ ಅನ್ನೋದು ಈ ಸಂದರ್ಶನದಲ್ಲಿ ತಿಳಿದು ಬಂದಿದೆ.

ಆಯುಷ್ ಉಪೇಂದ್ರ ಮಾತು:

‘ನನ್ನ ಜೀವನದ ಫಿಲಾಸಫಿ ಇಷ್ಟೇ, ಪ್ರಪಂಚದಲ್ಲಿ ಟ್ಯಾಲೆಂಟ್ ಇರುವವರು ಸಾವಿರಾರು ಜನರಿದ್ದಾರೆ ಆದರೆ ಅವಕಾಶ ಸಿಗುತ್ತಿಲ್ಲ. ನಾನು ಅಪ್ಪನ ಹೆಸರಿನಲ್ಲಿ ಹುಟ್ಟಿ ಬಂದಿದ್ದೀನಿ ಆದರೆ ಅವರ ಹೆಸರಿನಲ್ಲಿ ಸಿನಿಮಾ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಅವರ ಹೆಸರು ಬಳಸಿ ಬದುಕೋದು ಅನಿವಾರ್ಯ ವಿಲ್ಲ, ನಟನೆಯಲ್ಲಿ ನನ್ನ ಪ್ರಯತ್ನ ಮಾಡುತ್ತೀನಿ ಆದರೆ ಯಾವುದೇ ರೀತಿಯ ಇನ್‌ಫ್ಲೂಯನ್ಸ್‌ ಬಳಸುವುದಿಲ್ಲ’ ಎಂದು ಈ ಹಿಂದೆ ಖಾಸಗಿ ವಾಹಿಯಲ್ಲಿ ನಟ ಉಪೇಂದ್ರ ಪುತ್ರ ಆಯುಷ್‌ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ಜನರು ಮಾತನಾಡುತ್ತಿರುವುದರ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಉಪ್ಪಿ ರಿಯಾಕ್ಷನ್:

‘ನನ್ನ ಮಗ ಮಾತನಾಡಿರುವುದು ಮನಸ್ಸಿನಿಂದ..ನಾನು ರಸ್ತೆಯಲ್ಲಿ ಹೋಗುತ್ತಿದ್ದರೆ ಸರ್ ನೋಡಿ ನಿಮ್ಮ ಮಗ ಎಷ್ಟು ಚೆನ್ನಾಗಿ ಮಾತನಾಡಿದ್ದಾನೆ ಎನ್ನುತ್ತಿದ್ದಾರೆ. ನಾನು ಎಡಿಟರ್‌ ಆಗುತ್ತೀನಿ ಇಲ್ಲ ಸಿನಿಮ್ಯಾಟೋಗ್ರಾಫರ್ ಆಗುತ್ತೀನಿ ಅಲ್ಲೂ ಅವಕಾಶ ಸಿಕ್ಕಿಲ್ಲ ಅಂದ್ರೆ ಇನ್ನು ಏನೋ ಮಾಡುತ್ತೀನಿ ಎಂದು ಹೇಳುತ್ತಾನೆ ಇದನ್ನು ನೋಡಿ ನನಗೆ ಅಬ್ಬಾ…ಸಾರ್ಥಕ ಅನಿಸುತ್ತಿತ್ತು. ಸಹಜವಾಗಿ ನಾವು ಹೇಗಿರಬೇಕು ಎಂದು ಸುಮ್ಮನೆ ಮಾತನಾಡಿರಬೇಕು ಅದನ್ನು ಕೇಳಿಸಿಕೊಂಡು ನನ್ನ ಮಗ ಮಾತನಾಡಿರಬೇಕು ಆದರೆ ನಾವು ಏನೂ ಹೇಳಿಕೊಟ್ಟಿಲ್ಲ’ ಎಂದು ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಉಪೇಂದ್ರ ಮಾತನಾಡಿದ್ದಾರೆ.

You may also like

Leave a Comment