Home » Chitti Babu: ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ತಿಳಿಸಿದ ಸಮಂತಾ!

Chitti Babu: ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ತಿಳಿಸಿದ ಸಮಂತಾ!

4 comments
Chitti Babu

Chitti Babu: ತೆಲುಗು ಮತ್ತು ತಮಿಳು ನಟಿ ಸಮಂತಾ ಅವರು ಇತ್ತೀಚೆಗೆ ಸುದ್ದಿಯಲ್ಲಿ ಇದ್ದು, ನಾಗಚೈತನ್ಯ ಅವರ ಜೊತೆ ವಿಚ್ಛೇದನ(divorce) ಬಳಿಕ ಸಮಂತಾ ಅವರು ಸಾಲು ಸಾಲು ಸವಾಲನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ನಿರ್ಮಾಪಕರ(producer)ರೊಬ್ಬರು ಸಮಂತಾ ಅವರ ಬಗ್ಗೆ ಕೆಟ್ಟದಾಗಿ ಮಾತಾನಾಡಿದ್ದಾರೆ.

ನಿರ್ಮಾಪಕರ(producer) ಕಿವಿ ಮೇಲಿನ ಕೂದಲಿನ ಬಗ್ಗೆ ಸಮಂತಾ ಅವರು ಸಾಮಾಜಿಕ ಜಾಲತಾಣ(social media) ದಲ್ಲಿ ಸ್ಕ್ರೀನ್ ಶಾಟ್ (screen shot) ವೊಂದನ್ನು ಶೇರ್ (share) ಮಾಡಿದ್ದಾರೆ. ‘ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ಅವರು ಗೂಗಲ್ (google) ನಲ್ಲಿ ಸರ್ಚ್(search) ಮಾಡಿ, ಅದರ ಸ್ಕ್ರೀನ್ ಶಾಟ್(screen shot) ವೊಂದನ್ನು ತೆಗೆದು ತಮ್ಮ ಸಾಮಾಜಿಕ ಜಾಲತಾಣ(social media) ದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸಮಂತಾ ಅವರು ಹೆಚ್ಚಾಗಿ ಯಾವುದೇ ವಿವಾದಕ್ಕೂ ಹೋಗದೆ ತಮ್ಮ ಪಾಡಿಗೆ ತಾವು ಇರುತ್ತಾರೆ ಆದರೆ ಕೆಲವೊಮ್ಮೆ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಅನೇಕರು ಸಮಂತಾ ಅವರು ಕಟುವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಚಿಟ್ಟಿಬಾಬು (Chitti Babu) ಅವರು ನಟಿ ಸಮಂತಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈಗ ನಟಿ ಅವರಿಗೆ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ದ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ನಲ್ಲಿ ಗೂಗಲ್(google) ನ ಸ್ಕ್ರೀನ್ ಶಾಟ್(screen shot) ಅನ್ನು ಸ್ಟೋರಿ (story) ಹಾಕುವ ಮೂಲಕ ಹಂಚಿ ಕೊಂಡಿದ್ದಾರೆ. ಅವರು ನೇರವಾಗಿ ಚಿಟ್ಟಿಬಾಬು ಅವರ ಹೆಸರು ಹೇಳದೆ ವ್ಯಂಗ್ಯವಾಗಿ ಸ್ಟೋರಿ (story) ಹಾಕಿದ್ದಾರೆ. ನೆಟ್ಟಿಗರಿಗೆ ಇದು ಚಿಟ್ಟಿಬಾಬು ಅವರಿಗೆ ಹಾಕಿರುವುದು ಎಂದು ಅರ್ಥ ಮಾಡಿಕೊಂಡಿದ್ದಾರೆ.

ಗೂಗಲ್(google) ನಲ್ಲಿ ಕಿವಿ ಮೇಲೆ ಕೂದಲು ಯಾಕೆ ಇರುತ್ತದೆ ಎಂಬುದರ ಬಗ್ಗೆ ತಿಳಿದು ಕೊಂಡಿರುವ ಸಮಂತಾ ‘ ಲೈಂಗಿಕ ಆಸಕ್ತಿಗೆ ಸಂಬಂಧಿಸಿದ ಟೆಸ್ಟಾಸ್ಟಿರಾನ್​ ಹಾರ್ಮೋನ್​ ಜಾಸ್ತಿ ಇರುವ ಪುರುಷರ ಕಿವಿಯಲ್ಲಿ ಕೂದಲು ಬೆಳೆಯುತ್ತದೆ’ ಎಂದು ಮಾಹಿತಿ ಇರುವ ಸ್ಕ್ರೀನ್ ಶಾಟ್ (screen shot)ಅನ್ನು ಹಂಚಿ ಕೊಂಡಿದ್ದಾರೆ.

ಚಿಟ್ಟಿಬಾಬು ಅವರು ‘ ಸಮಂತಾ ಅವರನ್ನು ಯಾರು ಸಿನೆಮಾಗಳಿಗೆ ನಾಯಕಿಯಾಗಿ ತೆಗೆದುಕೊಳ್ಳುತ್ತಿಲ್ಲ ಅದಕ್ಕೆ ಅವರು ಸ್ತ್ರೀ ಪ್ರಧಾನ ಚಿತ್ರಗಳನ್ನು ಮಾಡುತ್ತಿದ್ದಾರೆ. ಅವರ ಮುಖವು ಅಜ್ಜಿ ಮುಖದಂತೆ ಆಗಿದೆ. ಅಂಥ ಮುಖ ಇಟ್ಟುಕೊಂಡು ಶಕುಂತಲೆಯ ಪಾತ್ರ ಹೇಗೆ ಮಾಡುತ್ತಾಳೋ ಏನೋ? ಕೇವಲ ಕ್ಯಾಮೆರಾಮ್ಯಾನ್ ಏನಾದರೂ ಗಿಮಿಕ್ ಮಾಡಬೇಕು ಅಷ್ಟೆ. ಅವಳು ಟಾಪ್ ಹೀರೋಯಿನ್ (top heroine) ಪಟ್ಟದಿಂದ ಬಿದ್ದೆ ತುಂಬಾ ಸಮಯವಾಗಿದೆ. ಇದೆ ಕಾರಣಕ್ಕೆ ಪುಷ್ಪ ಸಿನೆಮಾದಲ್ಲಿ ಅವರು ಊ ಅಂಟಾವ, ಊಹು ಅಂಟಾವ ಥರಹದ ಹಾಡಿಗೆ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡುವ ಸಲುವಾಗಿ ಇನ್ನು ಇಂಡಸ್ಟ್ರಿಯಲ್ಲಿ ಇರಬೇಕು ಎಂದು ಈ ರೀತಿಯ ಹಾಡುಗಳಿಗೆ ನಟಿಸುತ್ತಿದ್ದಾಳೆ ಎಂದು ಮಾತನಾಡಿದ್ದರು.

ಶಕುಂತಲೆಯು ಅಪ್ರತಿಮ ಸುಂದರಿಯಾಗಿದ್ದು ಅವರ ಪಾತ್ರಕ್ಕೆ ಸಮಂತಾ ಕಂಡಿತವಾಗಿಯು ಸೂಟ್(suit) ಆಗಲ್ಲ. ಅವರ ಮುಖ ಪೂರ್ತಿ ಕಿತ್ತುಹೋಗಿದೆ. ಹಾಗಾಗೀ ಜನರನ್ನು ಸೆಳೆಯಲು ನಾನು ಸತ್ತು ಹೋಗಿತ್ತಿನಿ ಎಂದು ಡ್ರಾಮಾ (drama) ಮಾಡುತ್ತಿದ್ದಾಳೆ ಎಂದು ಸಮಂತಾ ಅವರ ಬ್ಯೂಟಿ(beauty) ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: V.Somanna: ವರುಣಾದಲ್ಲಿ ಈಗ ಸೋಮಣ್ಣ ತರುಣ | ಕ್ಷೇತ್ರ ಸುತ್ತಿ ವರುಣಾದಲ್ಲಿ 100 ಪರ್ಸೆಂಟ್ ಗೆಲ್ಲುವ ವಿಶ್ವಾಸವಿದೆ ಎಂದ ಸೋಮಣ್ಣ !

You may also like

Leave a Comment