1
Jama Masjid: ಸಂಭಲ್ ಜಾಮಾ ಮಸೀದಿ ವಿವಾದದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ (ಮಾ.12) ಮಸೀದಿಗೆ ಹೊರಗಿನಿಂದ ಬಣ್ಣ ಬಳಿಯಲು ಅನುಮತಿ ನೀಡಿದ್ದು, ಜೊತೆಗೆ ಯಾವುದೇ ಹಾನಿ ಮಾಡದೇ ದೀಪಗಳಿಂದ ಅಲಂಕಾರ ಮಾಡಲು ಆದೇಶ ನೀಡಿದೆ.
ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿ ಆವರಣವನ್ನು ಸ್ವಚ್ಛಗೊಳಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಅಲಹಾಬಾದ್ ಹೈಕೋರ್ಟ್ ನಿರ್ದೇಶನವನ್ನು ನೀಡಿತ್ತು. ಆದರೆ ಬಣ್ಣ ಬಳಿಯುವುದಕ್ಕೆ ಅವಕಾಶ ನೀಡಿರಲಿಲ್ಲ.
