Home » Uttar pradesh: ಸಲಿಂಗ ಪ್ರೇಮ ಪ್ರಕರಣ: ಮನೆಯವರನ್ನು ಧಿಕ್ಕರಿಸಿ ಮದುವೆಯಾದ ಸುಂದರ ಲೆಸ್ಬಿಯನ್ ಹುಡುಗಿಯರ ಪತ್ತೆ!

Uttar pradesh: ಸಲಿಂಗ ಪ್ರೇಮ ಪ್ರಕರಣ: ಮನೆಯವರನ್ನು ಧಿಕ್ಕರಿಸಿ ಮದುವೆಯಾದ ಸುಂದರ ಲೆಸ್ಬಿಯನ್ ಹುಡುಗಿಯರ ಪತ್ತೆ!

by ಕಾವ್ಯ ವಾಣಿ
0 comments

Uttar pradesh: ಉತ್ತರ ಪ್ರದೇಶದ (Uttar pradesh) ಚಂದೌಲಿ ಜಿಲ್ಲೆಯ ಮುಘಲ್‌ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಎರಡು ವಿಭಿನ್ನ ಜಾತಿಗೆ ಸೇರಿದ ಹುಡುಗಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಹುಡುಗಿಯರಿಬ್ಬರು ಪೋಷಕರಿಗೆ ಹೆದರಿ ಮನೆಯಿಂದ ಓಡಿಹೋಗಿ ಉಜ್ಜಯಿನಿಯಲ್ಲಿ ವಿವಾಹವಾಗಿದ್ದಾರೆ. ಇಬ್ಬರು ಹೆಣ್ಮಕ್ಕಳು ಕಾಣೆಯಾದ ಬಗ್ಗೆ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಇಬ್ಬರೂ ಹುಡುಗಿಯರನ್ನು ಹುಡುಕಿ ಉಜ್ಜಯಿನಿಯಲ್ಲಿ ಸುರಕ್ಷಿತವಾಗಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದರು. ನಂತರ, ಇಬ್ಬರನ್ನೂ ವಿಚಾರನೆ ನಡೆಸಿದ ಬಳಿಕ ಅವರನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಮಾಹಿತಿಯ ಪ್ರಕಾರ, ಬೇರೆ ಜಾತಿಗೆ ಸೇರಿದ ಕುಟುಂಬವು ಆ ಹಳ್ಳಿಯಲ್ಲಿ ಇನ್ನೊಂದು ಜಾತಿಗೆ ಸೇರಿದ ಕುಟುಂಬದ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದೆ. ಆ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗಿಯರ ಮಧ್ಯೆ ಸ್ನೇಹ ಉಂಟಾಗಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರಿಬ್ಬರ ಮಧ್ಯೆ ಆಕರ್ಷಣೆ ಉಂಟಾಗಿತ್ತು. ಆಕರ್ಷಣೆ ಪರಸ್ಪರ ಪ್ರೀತಿಗೆ ತಿರುಗಿ ಎರಡೂ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಸೇರಿ ಸಲಿಂಗ ಕಾಮ ನಡೆಸುತ್ತಿದ್ದರು. ಇಬ್ಬರೂ ಹುಡುಗಿಯರೇ ಆಗಿರುವುದರಿಂದ ಎರಡೂ ಮನೆಯವರಿಗೆ ಯಾವುದೇ ಸಂಶಯ ಬಂದಿರಲಿಲ್ಲ.

ಆದರೆ ಇಬ್ಬರೂ ಹುಡುಗಿಯರು ಮನೆಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದರು. ನಂತರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಆಗ ಅವರ ಮೊಬೈಲ್ ನೆಟ್‌ವರ್ಕ್ ಆಧರಿಸಿ ಉಜ್ಜಯಿನಿಯಲ್ಲಿ ಅವರಿಬ್ಬರ ಸ್ಥಳವನ್ನು ಪೊಲೀಸರು ಕಂಡುಕೊಂಡರು. ಅಲ್ಲಿಂದ ಇಬ್ಬರೂ ಹುಡುಗಿಯರನ್ನು ಪೊಲೀಸರು ವಶಕ್ಕೆ ಪಡೆದು ವಾಪಸ್ ಊರಿಗೆ ಕರೆದುಕೊಂಡು ಬಂದರು.

You may also like